ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿ ಸಮೀಪದ ಉತ್ತರ ಗುಡ್ಡದಲ್ಲಿ ಮಂಗಳವಾರ ಮೇಯಲು ಹೋಗಿದ್ದ ಜಯಪ್ಪ ಎಂಬುವವರ ಕುರಿ ಹಿಂಡಿನ ಮೇಲೆ ಚಿರತೆಯೊಂದು ದಾಳಿ ಮಾಡಿ 12ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಒಂದು ಕುರಿಯನ್ನು ಚಿರತೆ ಹೊತ್ತುಕೊಂಡು ಹೋಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಹೋಗಿದ್ದ ವಲಯ ಅರಣ್ಯಾಧಿಕಾರಿ ಹರ್ಷ ಅವರು ಚಿರತೆಯ ಹೆಜ್ಜೆಗುರುತು ಪತ್ತೆ ಮಾಡಿ ದಾಳಿಯನ್ನು ಖಚಿತಪಡಿಸಿದ್ದಾರೆ.
ಮಳೆಯ ಕಾರಣಕ್ಕೆ ಕುರಿಗಳಲ್ಲ ಹಿಂಡಾಗಿ ಒಂದೇ ಕಡೆ ನಿಂತಿದ್ದಾಗ ಚಿರತೆ ದಾಳಿ ಮಾಡಿದ್ದು ,ಸಿಕ್ಕಸಿಕ್ಕ ಕುರಿಗಳ ಕುತ್ತಿಗೆಯ ಭಾಗವನ್ನು ಕಚ್ಚಿದೆ. ಹೀಗಾಗಿ 12ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು ಹಲವು ಕುರಿಗಳು ಗಾಯಗೊಂಡಿವೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಗುಡ್ಡ ಅರಣ್ಯ ಪ್ರದೇಶದಲ್ಲಿ ಚಿರತೆ, ಕತ್ತೆಕಿರುಬ, ಕರಡಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಕುರಿಗಾಯಿಗಳು ಎಚ್ಚರದಿಂದಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.
PublicNext
15/10/2021 09:03 am