ದಾಂಡೇಲಿ: ಈ ಪ್ರಕೃತಿಯೆ ಹೀಗೆ. ವಿಜ್ಞಾನಕ್ಕೆ ಸವಾಲೊಡ್ಡುವ ಹಲವು ವಿಸ್ಮಯಗಳನ್ನು ಜಗತ್ತಿಗೆ ಅನಾವರಣಗೊಳಿಸುವ ಮೂಲಕ ಪ್ರಕೃತಿ ತನ್ನದೇ ಆದ ವೈಶಿಷ್ಟ್ಯತೆಯನ್ನು ಸಾರುತ್ತಿದೆ. ಪ್ರಕೃತಿಯ ವಿವಿಧ ವಿಸ್ಮಯಗಳು ಹೊಸ ಅನುಭವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ. ಅಂದ ಹಾಗೆ ಚೌತಿಯ ದಿನಗಣನೆಯಲ್ಲಿರುವ ಸಮಯದಲ್ಲಿ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದ ಕುಳಗಿ ರಸ್ತೆಯ ಮನೆಯೊಂದರಲ್ಲಿ ವಿಚಿತ್ರ ಸಂಗತಿಯೊಂದು ಶನಿವಾರ ಸಂಜೆ ನಡೆದಿದೆ.
ಇದು ವಿಚಿತ್ರವಾದರು ಸತ್ಯ ಕುಳಗಿ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ವಿನಾಯಕ ಲಕ್ಷ್ಮಣ ಕದಂ ಅವರು ತನ್ನ ಹುಟ್ಟೂರು ಹಳಿಯಾಳದ ಹಂಪಿಹಳ್ಳಿಯಿಂದ ಪಪ್ಪಾಯಿ ಹಣ್ಣೊಂದನ್ನು ತಂದಿದ್ದರು. ಮನೆಗೆ ಬಂದ ನಂತರ ಪಪ್ಪಾಯಿ ಹಣ್ಣನ್ನು ತಿನ್ನಲೆಂದು ಸರಿ ಅರ್ಧ ಮಾಡಿ ತುಂಡರಿಸಿದರೇ ಪಪ್ಪಾಯಿ ಹಣ್ಣನ್ನು ಎರಡು ಭಾಗವನ್ನಾಗಿ ಮಾಡಿದರೂ ಎರಡು ಭಾಗಗಳ ಮಧ್ಯದಲ್ಲಿ ಹಣ್ಣಿನ ಬೀಜಗಳಿರುವ ಬದಲಿಗೆ ಗಣಪನ ಆಕಾರದ ಗಡ್ಡೆಯ ರೂಪವೊಂದು ಕಂಡು ಬಂದಿದೆ.
ಇದನ್ನು ನೋಡಿದ ಮನೆಮಂದಿಯೆಲ್ಲ ಒಮ್ಮೇಲೆ ಆಶ್ಚರ್ಯಚಕಿತರಾದರಲ್ಲದೇ ಭಕ್ತಿಯ ಭಾವಪರವಶರಾದರು. ತಕ್ಷಣವೆ ಅಲ್ಲೆ ಇದ್ದ ಏಳು ಮಕ್ಕಳ ತಾಯಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದಾರೆ.
ಕಿರಣ್ ಮಾವಿನಕಟ್ಟಾ ಕಾರವಾರ
PublicNext
30/08/2021 11:29 am