ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಯಿ ಇರದ ವಿಚಿತ್ರ ಕುರಿ ಮರಿ ಜನನ.. ಆಶ್ಚರ್ಯಚಕಿತರಾದ ಜನ...!

ದಾವಣಗೆರೆ: ವಿಚಿತ್ರವಾದ ಕುರಿ ಮರಿಯೊಂದು ಜನಿಸಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಈರಣ್ಣ ಎಂಬುವರ ಕುರಿಯು ಮರಿ ಹಾಕಿದ್ದು, ಅದಕ್ಕೆ ಬಾಯಿ ಇಲ್ಲ. ಜೊತೆಗೆ ಕಣ್ಣುಗಳು ಕುತ್ತಿಗೆಯ ಭಾಗದಲ್ಲಿ ಇದ್ದು, ಮೂಗು ಚೂಪಾಗಿದೆ.

ಈ ತರಹದ ವಿಚಿತ್ರ ಮರಿ ಜನಿಸಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದೆ. ಈ ಹಿಂದೆಯು ಕೂಡ ಇವರಿಗೆ ಸೇರಿದ ಕುರಿಯು ವಿಚಿತ್ರವಾದ ಮರಿಗೆ ಜನ್ಮ ನೀಡಿದ್ದು, ಈ ಬಾರಿಯು ಕೂಡ ಮತ್ತೊಂದು ಕುರಿ ವಿಚಿತ್ರ ಮರಿಗೆ ಜನ್ಮ ನೀಡಿದೆ. ಇನ್ನೂ ಈ ಕುರಿ ಮರಿಯನ್ನ ನೋಡಲು ಜನರ ದಂಡೆ ಆಗಮಿಸಿದ್ದು, ಎಲ್ಲರಲ್ಲೂ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಮಾತ್ರವಲ್ಲ, ಇದು ಪ್ರಕೃತಿ ವಿಸ್ಮಯಕ್ಕೆ ಜನರು ಮೂಕವಿಸ್ಮಿತರಾಗಿದ್ದಾರೆ‌.

Edited By : Nagesh Gaonkar
PublicNext

PublicNext

23/02/2021 12:25 pm

Cinque Terre

101.12 K

Cinque Terre

1

ಸಂಬಂಧಿತ ಸುದ್ದಿ