ಕಾರವಾರ: ಚಿರತೆಯೊಂದು ನಾಯಿ ಹಿಡಿಯಲು ಮನೆಯ ಬಳಿ ಬಂದು ಸುತ್ತಾಡಿ ಕೊನೆಗೆ ಕೋಳಿಯನ್ನೇ ಹೊತ್ತೊಯ್ದ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಂಡಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕೊಂಡಳ್ಳಿ ನಿವಾಸಿ ರಮಾನಂದ ಎಂಬವರ ಮನೆಯ ಬಳಿ ಚಿರತೆ ಓಡಾಟ ನಡೆಸಿದೆ.
ಬೆಳಗ್ಗಿನ ಜಾವ ನಾಯಿ ಹಿಡಿಯಲು ಮನೆಯ ಬಳಿ ಬಂದು ಸುತ್ತಾಟ ನಡೆಸಿದೆ.
ನಾಯಿ ಸಿಗದ ಹಿನ್ನೆಲೆಯಲ್ಲಿ ಗೂಡಿನಲ್ಲಿದ್ದ ಕೋಳಿ ಹಿಡಿದು ಚಿರತೆ ಕಾಡಿನತ್ತ ಹೋಗಿದೆ. ಮನೆ ಯಜಮಾನ
ಕೋಳಿ ಇಲ್ಲದಿರುವುದರಿಂದ ಸಿ.ಸಿ. ಟಿವಿ ಪರಿಶೀಲಿಸಿದಾಗ ಚಿರತೆ ಬಂದು, ಕೋಳಿ ಹೊತ್ತೊಯ್ದಿದ್ದು ಗಮನಕ್ಕೆ ಬಂದಿದೆ.
PublicNext
20/01/2021 11:49 am