ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿ ರಾಜ್ಯದಲ್ಲೊಂದು ಹವಾಮಾನ : ಹಿಮಾಲಯದಲ್ಲಿ ವಿಪರೀತ ಹಿಮ,ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲೂ ಮಳೆ

ನವದೆಹಲಿ: ದೇಶದಲ್ಲಿ ಒಂದೊಂದು ಕಡೆ ಒಂದೊಂದು ವಾತಾವರಣವಿದೆ. ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣವಿದ್ದರೆ, ನೋಡ ನೋಡ್ತಿದ್ದಂತೆ ಮಳೆ ಸುರಿದೇ ಬಿಡುತ್ತಿದೆ.

ಕೊರೊನಾ ವೈರಸ್, ಹಕ್ಕಿಜ್ವರದ ಬಳಿಕ ಇದೀಗ ಹವಾಮಾನ ವೈಪರೀತ್ಯದ ಬಗ್ಗೆ ಆತಂಕ ಎದುರಾಗಿದೆ.

ಹಿಮಾಲಯದ ತಪ್ಪಲಿನಲ್ಲಿ ಹೆಪ್ಪುಗಟ್ಟುವಂತಹ ಹಿಮ, ಉತ್ತರ ಭಾರತದಲ್ಲಿ ಚಳಿ ಜೊತೆಗೆ ಮಳೆಯಾಗುತ್ತಿದೆ.

ಇನ್ನು ದಕ್ಷಿಣ ಭಾರತದಲ್ಲಿ ಚಳಿಗಾಲದಲ್ಲಿ ಕೂಡ ವರ್ಷಧಾರೆಯಾಗುತ್ತಿದೆ. ಹೀಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ದಿಗ್ಭ್ರಾಂತರಾಗಿದ್ದಾರೆ.

ಜಮ್ಮು & ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಆಗಿದ್ದು, ಹಿಮಾಲಯದಲ್ಲಿ ಭಾರೀ ತಾಪಮಾನ ಕುಸಿತದಿಂದಾಗಿ ಈ ರಾಜ್ಯಗಳಲ್ಲಿ 60 ಸೆಂ.ಮೀ ಗಿಂತ ಹೆಚ್ಚಿನ ಹಿಮಪಾತವಾಗಿದೆ.

ದೆಹಲಿ, ಪಂಜಾಬ್, ಹರ್ಯಾಣ, ಅರುಣಾಚಲ ಪ್ರದೇಶ, ರಾಜಸ್ಥಾನ. ಅರುಣಾಚಲ ಪ್ರದೇಶದಲ್ಲಿ ಹಿಮಮಿಶ್ರಿತ ಮಳೆಯಾಗಿದೆ.

ಹವಾಮಾನ ಇಲಾಖೆ ಪ್ರಕಾರ, ಇಂದಿನಿಂದ ಪಶ್ಚಿಮ ಹಿಮಾಲಯನ್ ಪ್ರದೇಶದ ಮೇಲೆ ಹೊಸ ಪಾಶ್ಚಿಮಾತ್ಯ ಅಡಚಣೆ ಉಂಟಾಗುವ ಸಾಧ್ಯತೆಯಿದೆ.

ಇದರ ಪರಿಣಾಮವಾಗಿ ವಾಯುವ್ಯ ಭಾರತದಲ್ಲಿ ಮುಂದಿನ 2-3 ದಿನಗಳಲ್ಲಿ ಕನಿಷ್ಠ ನಿರೀಕ್ಷಿಸಿದೆ. ಅದಾಗ್ಯೂ ನಂತರದ ಎರಡು ದಿನಗಳಲ್ಲಿ ಪಂಜಾಬ್, ಹರಿಯಾಣ, ಚಂಡೀಗಡ್, ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಕ್ರಮೇಣ ಹವಾಮಾನ 2-4 ರಷ್ಟು ಕುಸಿಯಲಿದೆ.

ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ. ಬಂಗಾಳಕೊಲ್ಲಿಯಿಂದ ಆಗ್ನೇಯ ಮಾರುತಗಳು ಬೀಸ್ತಿರೋ ಕಾರಣ ದಕ್ಷಿಣ ಭಾರತದಲ್ಲಿ 5 ದಿನಗಳವರೆಗೆ ಗುಡುಗು ಸಹಿತ ವ್ಯಾಪಕ ಮಳೆ.

Edited By : Nirmala Aralikatti
PublicNext

PublicNext

07/01/2021 01:32 pm

Cinque Terre

65.36 K

Cinque Terre

0