ಬೆಂಗಳೂರು: ಬಾವಿಯಲ್ಲಿ ಆಶ್ರಯ ಪಡೆದಿದ್ದ ಭಾರೀ ಗಾತ್ರದ ಮೊಸಳೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಟಿ.ನರಸೀಪುರ ತಾಲ್ಲೂಕಿನ ಸಿ.ಬಿ ಹುಂಡಿ ಗ್ರಾಮದ ಜಮೀನಿನ ಬಾವಿಯಲ್ಲಿ ಈ ಮೊಸಳೆ ಪತ್ತೆಯಾಗಿದೆ. 15ರಿಂದ 20 ಅಡಿ ಆಳದ ಬಾವಿಯಲ್ಲಿ ಮೊಸಳೆ ಸೇರಿಕೊಂಡಿತ್ತು. ಇದು ಬರೋಬ್ಬರಿ 750 ಕೆಜಿ ತೂಕದ ಹೊಂದಿದೆ. ಸುಮಾರು 15ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಬಳಿಕ ರಂಗನತಿಟ್ಟು ಪಕ್ಷಿಧಾಮದ ಕಾವೇರಿ ನದಿಗೆ ಬಿಡಲು ತೀರ್ಮಾನಿಸಲಾಗಿದೆ.
PublicNext
27/09/2020 02:19 pm