ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮಳೆಯಿಂದ ಜಲಾವೃತವಾದ ಯಲ್ಲಮ್ಮ ದೇವಸ್ಥಾನ

ಅಥಣಿ: ರಾಜ್ಯದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಅವಾಂತರಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತವಾಗಿದೆ. ಕಳೆದ ರಾತ್ರಿ ಮಹಾರಾಷ್ಟ್ರ ಹಾಗೂ ಗಡಿ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ದೇವಸ್ಥಾನದ ಮುಂಭಾಗ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿದು ದೇವಸ್ಥಾನದ ಒಳಗೆ ಮಳೆ ನೀರು ಪ್ರವೇಶ ಮಾಡಿದೆ.

ಮೊಳಕಾಲ ಉದ್ದಕ್ಕೂ ನೀರಿನ ಮಧ್ಯದಲ್ಲಿ ಶಕ್ತಿ ದೇವತೆಗೆ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ನೀರಿನಲ್ಲಿ ಅಲ್ಪ ಪ್ರಮಾಣದ ಒಳಹರಿವು ಇರುವುದರಿಂದ ಭಕ್ತರು ದೂರಿನಿಂದಲೇ ದೇವತೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ.

Edited By :
PublicNext

PublicNext

06/09/2022 11:09 am

Cinque Terre

33.15 K

Cinque Terre

0