ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರ್ಗಿ: ಭೀಮೆ ಪ್ರವಾಹದಿಂದ ನದಿ ಯಲ್ಲಮ್ಮದೇವಸ್ಥಾನ ಜಲಾವೃತ

ಅಫಜಲಪುರ: ಭೀಮಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ತಾಲ್ಲೂಕಿನ ನದಿ ಯಲ್ಲಮ್ಮನ ದೇವಸ್ಥಾನ ಜಲಾವೃತಗೊಂಡಿದ್ದು ದೇವಸ್ಥಾನದ ಒಳಗಡೆ ಸುಮಾರು 1 ರಿಂದ 2 ಅಡಿಯಷ್ಟು ನೀರು ನಿಂತಿದೆ.

ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದರಿಂದ ಸಂಪರ್ಕ ಕಡಿತಗೊಂಡಿದ್ದು ಭಕ್ತರಿಗೆ ದೇವಸ್ಥಾನ ಪ್ರವೇಶ ಬಂದ ಮಾಡಲಾಗಿದೆ.

ಭಕ್ತರು ದೂರದಿಂದಲೆ ದರ್ಶನ ಪಡೆದು ಹಿಂದುರುಗುತ್ತಿದ್ದಾರೆ. ಕ್ಷಣ ಕ್ಷಣಕ್ಕು ಭೀಮಾ ನದಿ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ.

ನಾಗನಾಥ.ಸಿ.ಹುಂಡೇಕಾರ.

Edited By : Manjunath H D
PublicNext

PublicNext

16/08/2022 01:23 pm

Cinque Terre

36.92 K

Cinque Terre

0