ಬೆಳಗಾವಿಯ ಗಾಲ್ಫ ಮೈದಾನದ ಮರಗಳ ಪೊದೆಯಲ್ಲಿ ಕಳೆದ ಶುಕ್ರವಾರದಿಂದ ಅವಿತುಕೊಂಡು ಕುಳಿತಿರುವ ಚಿತರೆಯು ನಿನ್ನೆ ಸೋಮವಾರ ರಾತ್ರಿ ಅರಣ್ಯ ಇಲಾಖೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯು ಹಗಲಿರುಳು ಪ್ರಯತ್ನ ನಡೆಸಿದೆ.ಆರು ಬೋನುಗಳನ್ನು,16 ಸಿಸಿಟಿವಿ
ಕ್ಯಾಮೆರಾಗಳನ್ನು ಬಳಸಿಕೊಳ್ಳಲಾಗಿದೆ. ಐವತ್ತು ಜನ ಅರಣ್ಯ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದೆ.
ಡಿ.ಎಫ್.ಓ ಶ್ರೀ ಎಚ್.ಎಸ್.ಅಂಥೋನಿ,ಎಸಿಎಫ್ ಶ್ರೀ.ಮಲ್ಲಿನಾಥಕುಸನಾಳ ಹಾಗೂ ಇತರ ಸಿಬ್ಬಂದಿ ಮಂಗಳವಾರ ಮುಂಜಾನೆಯಿಂದ ಕಾರ್ಯಾಚರಣೆಯನ್ನು ಫುನರಾರಂಭಿಸಿದ್ದಾರೆ.ಚಿರತೆಯ ಶೋಧಕ್ಕಾಗಿ 16 ಕ್ಯಾಮೆರಾಗಳನ್ನು ಗಾಲ್ಫ ಮೈದಾನದ ಮರಗಳಿಗೆ ಅಳವಡಿಸಲಾಗಿದೆ.
ಈ ಕ್ಯಾಮೆರಾಗಳಲ್ಲಿ ಸೆರೆಯಾದ ಚಿರತೆಯ (ಸೋಮವಾರ ರಾತ್ರಿ ಸೆರೆಯಾಗಿದೆ) ಚಿತ್ರವು ಇಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅರಣ್ಯ ಇಲಾಖೆಯ ಅಧಿಕೃತ ಮೂಲಗಳಿಂದ ಲಭಿಸಿದೆ.
ಚಿರತೆಯನ್ನು ಆದಷ್ಟು ಶೀಘ್ರವೇ ಸೆರೆಹಿಡಿಯುವ ವಿಶ್ವಾಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
PublicNext
09/08/2022 04:35 pm