ಸಿಡ್ನಿ: ಸಮುದ್ರದಲ್ಲಿ ಈಜಲು ಹೋದ ಈಜುಗಾರ ಬಿಳಿ ಶಾರ್ಕ್ ದಾಳಿಗೆ ಬಲಿಯಾಗಿದ್ದಾನೆ. ಬ್ರಿಟೀಷ್ ಮೂಲದ ಸಿಮೊನ್ ನೆಲ್ಲಿಸ್ಟ್ (46) ಎಂಬಾತನೇ ಶಾರ್ಕ್ ದಾಳಿಗೆ ಬಲಿಯಾದ ವ್ಯಕ್ತಿ.
ಆಸ್ಟ್ರೇಲಿಯಾದ ಸಿಡ್ನಿಯ ಲಿಟಲ್ ಬೇ ಬೀಚ್‌ನಲ್ಲಿ ನಿನ್ನೆ ಬುಧವಾರ ಈ ಘಟನೆ ನಡೆದಿದೆ. ಸ್ಥಳೀಯರು ತಮ್ಮ ಮೊಬೈಲ್ ಫೋನ್‌ನಲ್ಲಿ ಇದರ ವಿಡಿಯೋ ಮಾಡಿದ್ದಾರೆ. ಈಜುಗಾರನ ಬಳಿ ಬಿಳಿ ಶಾರ್ಕ್ ಬರುವಾಗ ಈಜುಗಾರ ಪ್ರಾಣಭಯದಿಂದ ಚೀರಾಡಿದ್ದಾರೆ. ಕ್ಷಣಾರ್ಧದಲ್ಲಿ ಈಜುಗಾರನನ್ನು ಕಚ್ಚಿ ಹಿಡಿದ ಬಿಳಿ ಶಾರ್ಕ್ ಆತನ ಹಲವು ಅಂಗಗಳನ್ನು ತಿಂದು ಹಾಕಿದೆ. ಕೆಲವು ಗಂಟೆಗಳ ನಂತರ ಈಜುಗಾರ ಸಿಮೊನ್ ಅವರ ದೇಹದ ಕೆಲವು ಅಂಗಗಳು ಪತ್ತೆಯಾಗಿವೆ ಎಂದು ಸಿಡ್ನಿ ಪೊಲೀಸರು ತಿಳಿಸಿದ್ದಾರೆ.
PublicNext
17/02/2022 05:36 pm