ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭೂಕಂಪದ ಮಾಹಿತಿ ನೀಡುವಾಗಲೇ ಶೇಕ್ ಆಯ್ತು ಧರೆ : ವಿಡಿಯೋದಲ್ಲಿ ಸೆರೆ

ಕ್ರೊಯೇಷಿಯಾ: ಮಧ್ಯ ಕ್ರೊಯೇಷಿಯಾದಲ್ಲಿ ಸಂಭವಿಸುತ್ತಿರುವ ಭಾರಿ ಭೂಕಂಪ 140 ವರ್ಷಗಳಲ್ಲಿಯೇ ಭಯಾನಕ ಎನ್ನಲಾಗಿದೆ.

ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ.ಭೂಕಂಪದಿಂದ ಕೆಲ ಕಟ್ಟಡಗಳು ನಲೆಕಚ್ಚಿವೆ.

ಏಳು ಜನರ ಪ್ರಾಣ ಪಕ್ಷಿಯು ಹಾರಿಹೋಗಿದೆ. ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ,ಕಟ್ಟಡಗಳ ನಷ್ಟವಾಗಿದೆ.

ನಗರದ ಆಗ್ನೇಯ ಭಾಗದಲ್ಲಿನ ಪೇಟ್ರಿಂಜಾ ಎಂಬಲ್ಲಿ ಭೂಕಂಪದಿಂದ ಹಾನಿ ಸಂಭವಿಸಿದೆ.

ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ.

2020ರಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

ಸ್ಲೋವಿನಿಯಾದ ಪರಮಾಣು ಕೇಂದ್ರವನ್ನೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಈ ಕುರಿತು ಜಾಗ್ರೆಬ್ ಪ್ರದೇಶದ ಸಚಿವರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಮತ್ತೊಮ್ಮೆ ಭೂಮಿ ನಡುಗಿದೆ.

ಇದರ ವಿಡಿಯೋ ಇದೀಗ ಭಾರಿ ವೈರಲ್ ಆಗಿದ್ದು, ಭೂಕಂಪದ ಭಯಾನಕತೆಯನ್ನು ತೆರೆದಿಟ್ಟಿದೆ.

Edited By : Nirmala Aralikatti
PublicNext

PublicNext

31/12/2020 01:17 pm

Cinque Terre

95.54 K

Cinque Terre

4

ಸಂಬಂಧಿತ ಸುದ್ದಿ