ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳೆಯ ಮಧ್ಯೆ ಸಿಲುಕಿದ ದನ: ರಕ್ಷಣೆ ಮಾಡಿದ ಸಾಹಸಿ ಯುವಕರು

ಬಂಟ್ವಾಳ: ನಾವೂರು ಗ್ರಾಮದ ಬಡಗುಂಡಿಯಲ್ಲಿ ಆ. 21ರಂದು ಯುವಕರಾದ ರಕ್ಷಿತ್ ಮೈಂದಾಳ ಹಾಗೂ ಲೋಕೇಶ್ ನಾವೂರು ಅವರು ಪ್ರವಾಹದ ನೀರನ್ನೂ ಲೆಕ್ಕಿಸದೆ ಹೊಳೆಯ ಮಧ್ಯದಲ್ಲಿ ಸಿಲುಕಿದ್ದ ದನವೊಂದನ್ನು ಸ್ನೇಹಿತರ ಸಹಾಯದಿಂದ ರಕ್ಷಿಸಿ ದಡ ಸೇರಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಿವಾಸಿ ಉಮೇಶ್ ಅವರು ಜಾನುವಾರುಗಳನ್ನು ಹೊಳೆಯ ಇನ್ನೊಂದು ಬದಿಗೆ ಮೇಯಲು ಬಿಟ್ಟಿದ್ದು, ಮಳೆಯಿಂದ ಹೊಳೆಯಲ್ಲಿ ಹೆಚ್ಚಿನ ನೀರು ಹರಿದುಬಂದಿತ್ತು. ಈ ವೇಳೆ ದನವೊಂದು ಹೊಳೆಯ ಮಧ್ಯೆ ಸಿಲುಕಿ ಹಾಕಿಕೊಂಡಿತ್ತು. ಈ ವೇಳೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದ ಯುವಕರ ತಂಡದ ಇಬ್ಬರು ಹೊಳೆಗೆ ಇಳಿದು ಹಗ್ಗದ ಮೂಲಕ ದನವನ್ನು ರಕ್ಷಿಸಿದ್ದಾರೆ.

ಈ ಕಾರ್ಯಕ್ಕೆ ಅವರ ಸ್ನೇಹಿತರಾದ ವಿನಯ್ ಸೂರ, ಹೇಮಂತ್ ಸೂರ, ನಿಶಾಂತ್ ನಾವೂರು, ರಂಜಿತ್, ಪ್ರಜ್ವಲ್, ಸುಮಂತ್ ಸಹಕರಿಸಿದ್ದಾರೆ.

Edited By : Nagesh Gaonkar
PublicNext

PublicNext

22/08/2021 11:02 pm

Cinque Terre

105.66 K

Cinque Terre

3

ಸಂಬಂಧಿತ ಸುದ್ದಿ