ಕನಕಪುರ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದ್ದು ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿದೆ. ತಾಲೂಕಿನ ಹಾರೋಹಳ್ಳಿ ಹೋಬಳಿಯ ಮುಡೇನಹಳ್ಳಿ ಗ್ರಾಮದ ಮಾರಕ್ಕ ಎಂಬುವವರ ವಾಸದ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದಿದ್ದು ವಾಸಕ್ಕೆಂದು ಇದ್ದ ಒಂದೇ ಮನೆ ಬಿದ್ದಿರುವುದರಿಂದ ತೀವ್ರ ತೊಂದರೆಯಾಗಿದೆ.
ಮರಳವಾಡಿಯ ರಾಹುತನಹಳ್ಳ ಕೆರೆ, ಮಾವತ್ತೂರು ಕೆರೆ ಸೇರಿದಂತೆ ಹಲವಾರು ಕೆರೆಗಳ ಕೋಡಿ ಬಿದ್ದಿದೆ. ಅರ್ಕಾವತಿ ನದಿ ತುಂಬಿ ಹರಿಯುತ್ತಿದೆ.
PublicNext
27/08/2022 04:14 pm