ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮುಂಗಾರು ಆರಂಭದಲ್ಲಿ ಅರಣ್ಯ ಸಂರಕ್ಷಣೆಗೆ ಒತ್ತು, ವಿದ್ಯುಕ್ತ ಚಾಲನೆ

ಗದಗ: ಮುಂಗಾರು ಆರಂಭವಾಗುತ್ತಿದ್ದಂತೆ ಅರಣ್ಯ ಇಲಾಖೆ ಸಸ್ಯ ಸಂರಕ್ಷಣೆ ಹಾಗೂ ಸಸ್ಯ ಪಾಲನೆಗೆ ಮುಂದಾಗಿದ್ದು, ಜಿಲ್ಲೆಯಾದ್ಯಂತ ವಿವಿಧ ತಳಿಯ ಸಸ್ಯಗಳನ್ನು ನೆಡಲು ಮುಂದಾಗಿದೆ.

ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಸಸ್ಯಪಾಲನಾ ಕೇಂದ್ರದಲ್ಲಿ ಸಾವಿರಾರು ಸಸಿಗಳನ್ನು ಪಾಲನೆ ಮಾಡಲಾಗಿದ್ದು, ಇಲ್ಲಿ ಅನೇಕ ರೀತಿಯ ಸಸಿಗಳು ವಿವಿಧ ತಳಿಯ ಸಸಿಗಳು ಲಭ್ಯ ಇದೆ. ಈಗ ಮುಂಗಾರು ಹಂಗಾಮಿನಲ್ಲಿ ವಿವಿಧ ತಳಿಯ ಸಸಿಗಳನ್ನು ನೆಡಲು ಅರಣ್ಯ ಇಲಾಖೆಯವರು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಮಳೆಗಾಲದಲ್ಲಿ ಸಸಿಗಳನ್ನು ಹಚ್ಚುವುದರಿಂದ ಸಸಿಗಳು ಸುಗಮವಾಗಿ ಬೆಳೆಯುತ್ತದೆ ಅನ್ನೂವುದಕ್ಕೆ ಪ್ರಾದೇಶಿಕ ಅರಣ್ಯ ಇಲಾಖೆಯವರು ತಯಾರಿ ಮಾಡಿಕೊಂಡಿದ್ದಾರೆ. ಸದಾ ಹಚ್ಚ ಹಸಿರಿನಿಂದ ಕಂಗೊಳಿಸುವ ಶೆಟ್ಟಿಕೆರೆಯ ಅರಣ್ಯದಲ್ಲಿ ನರ್ಸರಿ ಇದ್ದು ಇಲ್ಲಿ ಸಾವಿರಾರು ಸಸಿಗಳನ್ನು ಪಾಲನೆ ಮಾಡಿ ರೈತರಿಗೆ ಸಾರ್ವಜನಿಕರಿಗೆ ಸಸಿಗಳನ್ನು ಕರಿಬೇವು, ಪತ್ರಿ, ಬನ್ನಿ ಸೇರಿದಂತೆ ವಿವಿಧ ತಳಿಯ ಸಸಿಗಳನ್ನು ಮುಂಗಾರು ಹಂಗಾಮಿನಲ್ಲಿ ವಿತರಿಸಲಾಗುವುದು. ಇನ್ನೂ ಸರಕಾರಿ ನಾಲಾದಲ್ಲಿ ಹಚ್ಚಲಿಕ್ಕೆ ಇರುವ ಸಸಿಗಳೆಂದರೆ ಹೊಳೆಮತ್ತಿ, ಹೊಳೆದ್ವಾಸವಾಳ, ಬಂಗಾಳ ಚಳ್ಳೆ, ಆಲ, ಅರಳಿ, ನೇರಳೆ, ಹುಣಸೆ ಗಿಡ, ಮಹಾಗನಿ, ಮಾವು, ಹಲಸು ಸೇರಿದಂತೆ ಅನೇಕ ಸಸಿಗಳು ಇವೆ.

ಇನ್ನೂ ಅರಣ್ಯ ಪ್ರದೇಶದಲ್ಲಿ ನೆಡತೊಪು ಬೆಳೆಸಲು ನೇರಳೆ, ತುಗ್ಗಲಿ,‌ ಹೊಳೆಮತ್ತಿ, ರಕ್ತಚಂದನ, ಶಿವನಿ, ನೆಲ್ಲಿ ಕಕ್ಕೆ, ಹೊನ್ನೆ, ಸಂಪಿಗೆ, ಬಿದಿರು ಅನೇಕ ತಳಿಯ ಸಸಿಗಳು ಹಚ್ಚಲಾಗುವುದು ಒಟ್ಟು 2,27,700 ಸಸಿಗಳನ್ನು ಲಕ್ಷ್ಮೇಶ್ವರ ಶಿರಹಟ್ಟಿಯ ತಾಲೂಕಿನಲ್ಲಿ ಹಚ್ಚಲಾಗುವುದು ಎಂದು ಆರ್.ಎಫ್.ಓ. ಸುಮಾ.ಎಚ್.ಹಳೆಹೊಳಿ ತಿಳಿಸಿದರು.

Edited By : Manjunath H D
PublicNext

PublicNext

31/05/2022 02:18 pm

Cinque Terre

30 K

Cinque Terre

0

ಸಂಬಂಧಿತ ಸುದ್ದಿ