ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಬೆಂಗಳೂರಿನ ಮರಗಳಿಗೆ ಮೊಳೆ ಹೊಡೆಯುವಂತಿಲ್ಲ: ಬಿಬಿಎಂಪಿ ಆದೇಶ

ಬೆಂಗಳೂರು :ಬಿಬಿಎಂಪಿಯ ಅರಣ್ಯ ಘಟಕದಿಂದ ಮಹತ್ವದ ಆದೇಶ ಹೊರಡಿಸಲಾಗಿದೆ. ಇನ್ಮುಂದೆ ಮರಗಳಿಗೆ ಮೊಳೆ ಹೊಡೆಯುದಂತೆ ಸೂಚಿಸಲಾಗಿದೆ. ಅದಲ್ಲದೆ ಮರಗಳ ಮೇಲೆ ಜಹೀರಾತು ಫಲಕ ಅಳವಡಿಕೆ ಶಿಕ್ಷಾರ್ಹ ಅಪರಾಧವಾಗಿದ್ದು, ಮರಗಳಿಗೆ ಮೊಳೆ, ಸ್ಟಾಪ್ಲರ್ ಪಿನ್ನು ಹೊಡೆಯುವುದು ನಿಶಿದ್ಧವಾಗಿದೆ ಎಂದು ಅರಣ್ಯ ಘಟಕದಿಂದ ತಿಳಿಸಲಾಗಿದೆ. ಇನ್ನು ವಿದ್ಯುತ್ ದೀಪ, ಕೇಬಲ್ ಅಳವಡಿಕೆಗೂ ಬಿಬಿಎಂಪಿ ನಿರ್ಬಂಧ ಹೇರಿದ್ದು, ಕಟ್ಟಡ ನಿರ್ಮಾಣ ಹಂತದ ಕಬ್ಬಿಣದ ರಾಡು ಹೊಡೆಯುವುದಕ್ಕೂ ನಿಷೇಧ ಹೇರಲಾಗಿದೆ.

ಹಾಗೆ ಮೊಳೆ, ಸ್ಟಾಪ್ಲರ್, ಕಬ್ಬಿಣ ಹೊಡೆಯುವುದರಿಂದ ಮರಗಳ ಹಾನಿಗೆ ಕಾರಣವಾಗಿದ್ದು, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976 ಕಲಂ 8ರ ಪ್ರಕಾರ ಶಿಕ್ಷಾರ್ಹ ಅಪರಾಧವು ವಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಜಾಹೀರಾತು, ಕೇಬಲ್ ಗಳನ್ನ ತೆರವುಗೊಳಿಸುವಂತೆ ಸಬಂಧಪಟ್ಟವರಿಗೆ ಬಿಬಿಎಂಪಿ ವತಿಯಿಂದ ನೊಟೀಸ್ ನಿಡಲಾಗಿದೆ.

Edited By : Nagaraj Tulugeri
PublicNext

PublicNext

15/09/2021 01:02 pm

Cinque Terre

71.93 K

Cinque Terre

2

ಸಂಬಂಧಿತ ಸುದ್ದಿ