ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ತೆಯಾಗಿದೆ ಹೊಸ ತಳಿಯ 'ಕಪ್ಪೆರಾಯ'

ಬೆಂಗಳೂರು- ಈ ಜೀವಜಗತ್ತು ಅತ್ಯಂತ ವಿಸ್ಮಯ. ಅದರಲ್ಲೂ ಉಭಯವಾಸಿಗಳು ನೀರಿನೊಳಗೂ ಭೂಮಿಯ ಮೇಲೂ ಬದುಕಬಲ್ಲ ವಿಶಿಷ್ಟ ದೈಹಿಕ ಲಕ್ಷಣಗಳನ್ನು ಹೊಂದಿವೆ. ಅದರಲ್ಲಿ ಕಪ್ಪೆ ಕೂಡ ಒಂದು. ಈಗ ಅದೇ ಕಪ್ಪೆಯ ವಿಚಾರವಾಗಿ ಹೊಸ ಸಂಗತಿಯೊಂದನ್ನು ಜೀವವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಪತ್ತೆಯಾಗಿರುವ ಹೊಸ ತಳಿಯ ಕಪ್ಪೆಗೆ ಜೀವವಿಜ್ಞಾನಿಗಳು "ಸ್ಫೆರೋಥೆಕಾ ಬೆಂಗಳೂರು" ಎಂದು ವೈಜ್ಞಾನಿಕವಾಗಿ ನಾಮಕರಣ ಮಾಡಿದ್ದಾರೆ. ವಿಸ್ಮಯದ ಸಂಗತಿ ಎಂದರೆ ಇದು ನಮ್ಮ ರಾಜಧಾನಿ ಬೆಂಗಳೂರಲ್ಲಿ ಪತ್ತೆಯಾಗಿದೆ.

ಈ ಪ್ರಬೇಧದ ಕಪ್ಪೆಗಳು ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮೌಂಟ್ ಕಾರ್ಮೆಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ. ದೀಪಕ್ ಅವರು ಹಾಗೂ ಅವರ ತಂಡ ಬೆಂಗಳೂರಿನ ಹೊರವಲಯದಲ್ಲಿ ಇದನ್ನ ಪತ್ತೆ ಹಚ್ಚಿ ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೆ ಕನ್ನಡದಲ್ಲಿ ಬಿಲಗಪ್ಪೆ ಎನ್ನಲಾಗುತ್ತೆ.

Edited By : Nagaraj Tulugeri
PublicNext

PublicNext

27/11/2020 07:53 am

Cinque Terre

81.59 K

Cinque Terre

6