ಹೊಸಪೇಟೆ- ಅರಣ್ಯ ಸಚಿವ ಆನಂದ್ ಸಿಂಗ್ ಅವರ ಮನೆ ಮುಂದೆ ನಿನ್ನೆ ತಡರಾತ್ರಿ ಮೊಸಳೆ ಪ್ರತ್ಯಕ್ಷವಾಗಿದೆ. ಕೂಡಲೇ ಅಲ್ಲಿಗೆ ಧಾವಿಸಿದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಮೊಸಳೆಯನ್ನು ಸೆರೆ ಹಿಡಿದು ಅದೇ ಪಾರ್ಕಿಗೆ ಕೊಂಡೊಯ್ದಿದ್ದಾರೆ. ಸಚಿವರ ನಿವಾಸದ ಬಳಿಯೇ ಕೆಳ ಹಂತದ ಕಾಲುವೆ ಇದೆ. ಅಲ್ಲಿಂದಲೇ ನೀರಿನ ರಭಸಕ್ಕೆ ಸಿಕ್ಕು ಈ ಮೊಸಳೆ ಇಲ್ಲಿ ಬಂದಿರಬಹುದು ಎನ್ನಲಾಗಿದೆ.
PublicNext
11/11/2020 10:14 am