ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕಾಲಿಕ ಮಳೆಗೆ ಅನ್ನದಾತ ಕಂಗಾಲು : ಮೊಳಕೆಯೊಡೆದ ಗೋವಿನ ಜೋಳ

ಬೆಳಗಾವಿ : ಅಕಾಲಿಕ ಮಳೆಯಿಂದ ಗೋವಿನ ಜೋಳ, ಹತ್ತಿ ಬೆಳೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಗೋವಿನ ಜೋಳ ಮಳೆಯಿಂದ ಮೊಳಕೆ ಒಡೆದಿದೆ. ಇನ್ನು ಹತ್ತಿ ಬೆಳೆಯು ಮಣ್ಣುಪಾಲಾಗಿದೆ.

ಸದ್ಯ ಪ್ರತಿ ಎಕರೆಗೆ 25 ರಿಂದ 30 ಸಾವಿರ ರೂ. ನಷ್ಟದಲ್ಲಿದ್ದಾನೆ ಅನ್ನದಾತ. ಸದ್ಯ ಸಂಕಷ್ಟದಲ್ಲಿರುವ ರೈತರು ಸರ್ಕಾರ ಸೂಕ್ತ ಪರಿಹಾರ ನೀಡುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

Edited By : Shivu K
PublicNext

PublicNext

25/11/2021 11:03 am

Cinque Terre

42.33 K

Cinque Terre

0

ಸಂಬಂಧಿತ ಸುದ್ದಿ