ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಕೋಲಾ: ಹಾವು ಕಡಿತಕ್ಕೊಳಗಾಗಿದ್ದ ರೈತ ಸಾವು

ಅಂಕೋಲಾ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರ ಹಾವು ಕಚ್ಚಿ ರೈತನೊರ್ವ ಮೃತಪಟ್ಟ ಘಟನೆ ತಾಲೂಕಿನ ಹೆಗ್ರೆಯಲ್ಲಿ ನಡೆದಿದೆ. ಹೆಗ್ರೆಯ ಮಾದೇವ ಗೌಡ ( 47) ಮೃತಪಟ್ಟ ರೈತ.

ಭಾನುವಾರ ಸಂಜೆ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಇವರಿಗೆ ಹಾವು ಕಚ್ಚಿತ್ತು. ನಿತ್ರಾಣಗೊಂಡಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಾತ್ರಿ 10.30ರ ಸುಮಾರಿಗೆ ದಾರಿ ಮಧ್ಯೆ ಹಿತ್ತಲಮಕ್ಕಿ ಬಳಿ ಮೃತಪಟ್ಟಿರುವುದಾಗಿ ಮೃತರ ಅಣ್ಣ ವಿನಾಯಕ ಗೌಡ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಮೃತರು ಪತ್ನಿ ಮಹಾದೇವಿ ಗೌಡ ಸೇರಿದಂತೆ ಅಪಾರ ಬಂಧು- ಬಳಗವನ್ನು ಬಿಟ್ಟು ಅಗಲಿದ್ದಾರೆ. ತಾ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದ್ದಾರೆ.

Edited By : Abhishek Kamoji
PublicNext

PublicNext

05/09/2022 04:48 pm

Cinque Terre

25.84 K

Cinque Terre

0

ಸಂಬಂಧಿತ ಸುದ್ದಿ