ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನಕಪುರ : ಆನೆ ದಾಳಿಗೆ ರೈತ ಬಲಿ

ಕನಕಪುರ : ಆನೆ ದಾಳಿಗೆ ರೈತನೋರ್ವ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕಾಡುಶಿವನಹಳ್ಳಿ ಗ್ರಾಮದ ಬಳಿಯ ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿ ಜರುಗಿದೆ.

ಆನೆ ದಾಳಿಗೆ ಮೃತನಾದ ರೈತ ಭದ್ರಗಿರಿಗೌಡ(೭೦) ಎಂದು ತಿಳಿದು ಬಂದಿದ್ದು ಈತ ಕಾಡುಶಿವನಹಳ್ಳಿ ಗ್ರಾಮದವರಾಗಿದ್ದು ಎಂದಿನಂತೆ ಹಸು ಮೇಯಿಸಲು ಗ್ರಾಮದ ಪಕ್ಕದ ಬಿಳಿಕಲ್ಲು ಅರಣ್ಯ ಪ್ರದೇಶಕ್ಕೆ ಶನಿವಾರ ಹೋಗಿದ್ದು ಸಂಜೆ ದನಗಳು ಮಾತ್ರ ಬಂದು ಹಸು ಮೇಯಿಸಲು ಹೋಗಿದ್ದ ಭದ್ರಗಿರಿಗೌಡ ಬರದಿದ್ದರಿಂದ ಗಾಬರಿಗೊಂಡ ಮನೆಯವರು ಅಕ್ಕಪಕ್ಕದಲ್ಲಿ ಹುಡುಕಿ ಕತ್ತಲಾದ್ದರಿಂದ ಭಾನುವಾರ ಹುಡುಕೋಣ ಎಂದು ಭಾನುವಾರ ಬೆಳಿಗ್ಗೆ ಹುಡುಕಲಾಗಿ ಕರಿಯಪ್ಪ ಮರಿದೊಡ್ಡೇಗೌಡರ ಹೊಲದ ಗಡಿಭಾಗದ ಬಂಡೆಯ ಬಳಿ ಭದ್ರೇಗೌಡರ ಮೃತ ದೇಹ ಪತ್ತೆಯಾಗಿದೆ.

ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬಿಳಿಕಲ್ಲು ಅರಣ್ಯ ಪ್ರದೇಶದಲ್ಲಿ ಆನೆಗಳ ಕಾಟ ಹೆಚ್ಚಾಗಿದ್ದು ಅರಣ್ಯ ಇಲಾಖೆಯವರ ಬೇಜವಾಬ್ದಾರಿತನ ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದ್ದು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣೆಯ ಎಸೈ ಅನಂತರಾಮ್ ಹಾಗೂ ಎಎಸೈ ಬಾಲನಾಯಕ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದು ಕಾಡುಶಿವನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

21/08/2022 11:01 pm

Cinque Terre

26.97 K

Cinque Terre

0

ಸಂಬಂಧಿತ ಸುದ್ದಿ