ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಸರಸ್ವತಿ ಪುರಂ ಬಡಾವಣೆಯಲ್ಲಿ ಗೂಳಿಯ ಹಾವಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ.
ಬಡಾವಣೆಯ ಸುಮಾರು 10ಕ್ಕೂ ಅಧಿಕ ಮಂದಿಗೆ ಗುದ್ದಿರೋ ಗೂಳಿ ಓರ್ವ ಯುವಕನನ್ನು ರಸ್ತೆ ಮೇಲೆ ಅಟ್ಟಾಡಿಸಿಕೊಂಡು ಗುದ್ದಿದ ಭಯಾನಕ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಕಂಡ ಕಂಡವರನ್ನು ಓಡಿಸಿಕೊಂಡು ಹೋಗ್ತಿರೋ ಮದವೇರಿದ ಗೂಳಿಯಿಂದಾಗಿ ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆಯವರು ಗೂಳಿಯನ್ನು ಹಿಡಿದು ಜನರ ನೆಮ್ಮದಿ ಕಾಯಬೇಕು ಎಂದು ಒತ್ತಾಯಿಸಿದ್ದಾರೆ.
PublicNext
25/11/2021 03:06 pm