ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನದಿಯಲ್ಲಿ ಸಿಲುಕಿತ್ತು ಆನೆ: ವರದಿಗೆ ತೆರಳಿದ್ದ ಪತ್ರಕರ್ತ ದುರ್ಮರಣ

ಭುವನೇಶ್ವರ್(ಒಡಿಶಾ): ಕಟಕ್ ಸಮೀಪದ ಮಹಾನದಿಯ ಮಧ್ಯದಲ್ಲಿ ಆನೆಯೊಂದು ಸಿಲುಕಿದೆ. ಈ ವೇಳೆ ಅದರ ರಕ್ಷಣಾ ಕಾರ್ಯಾಚರಣೆ ನಡೆಸಲು ಹೋದ ಸಿಬ್ಬಂದಿಯೊಂದಿಗೆ ಓರ್ವ ಪರ್ತಕರ್ತ ಹೋಗಿದ್ದಾರೆ. ಈ ವೇಳೆ ಬೋಟ್ ಮಗುಚಿದ ಪರಿಣಾಮ ಓ ಟಿವಿ ವಾಹಿನಿ ಮುಖ್ಯ ವರದಿಗಾರ ಅರಿಂದಾಮ್ ದಾಸ್ ನೀರಿನ ರಭಸಕ್ಕೆ ಸಿಕ್ಕು ದಾರುಣವಾಗಿ ಮೃತಪಟ್ಟಿದ್ದಾರೆ.

ಲೈಫ್ ಜಾಕೆಟ್ ಧರಿಸಿದ್ದರೂ ಈ ದುರಂತ ಸಂಭವಿಸಿದೆ. ಬೋಟ್ ನಲ್ಲಿದ್ದ ವಿಪತ್ತು ನಿರ್ವಹಣೆ ತಂಡದ ಇತರ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಮೃತರಾದ ಪತ್ರಕರ್ತ ಅರಿಂದಮ್ ದಾಸ್ ನಕ್ಸಲ್ ಕಾರ್ಯಾಚರಣೆ, ಪ್ರಾಕೃತಿಕ ವಿಕೋಪ, ವನ್ಯಜೀವಿಗಳ ಬಗ್ಗೆ ವರದಿ ಮಾಡಿ ಒಡಿಶಾದಲ್ಲಿ ಖ್ಯಾತಿ ಪಡೆದಿದ್ದರು. ಅವರ ಅಕಾಲಿಕ ಸಾವಿಗೆ ಒಡಿಶಾ ಸರ್ಕಾರ ಸಂತಾಪ ಸೂಚಿಸಿದೆ.

Edited By : Nagesh Gaonkar
PublicNext

PublicNext

25/09/2021 06:55 pm

Cinque Terre

239.76 K

Cinque Terre

6

ಸಂಬಂಧಿತ ಸುದ್ದಿ