ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಳುಗುತ್ತಿದೆ ದೋಣಿ, ಕಿರುಚಾಟ, ನದಿಗೆ ಹಾರಿದ ಜನ : ವಿಡಿಯೋ ವೈರಲ್

ಜೊರ್ಹಾತ್ : ಮುಳುಗುತ್ತಿದೆ ದೋಣಿ, ಬದುಕಬೇಕೆಂಬ ಹಂಬಲ, ಹಿಂದೆಮುಂದೆ ನೋಡದೇ ನೀರಿಗೆ ದುಮುಕುತ್ತಿರುವ ಜನ ಇದೇಲ್ಲ ದೃಶ್ಯಗಳು ಕಂಡು ಬಂದದ್ದು ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ. ಹೌದು ನಿನ್ನೆ ಬುಧವಾರ ಸುಮಾರು 100 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮೃತಪಟ್ಟು, ಇಬ್ಬರು ನಾಪತ್ತೆಯಾಗಿದ್ದಾರೆ. ಉಳಿದವರನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಸಫಲವಾಗಿದೆ.

ಡಿಕ್ಕಿ ಸಂಭವಿಸಿ ದೋಣಿ ಮುಳುಗುತ್ತಿರುವಾಗ ಜನ ಆತಂಕದಿಂದ, ಚೀರಾಡುತ್ತಾ ನದಿಗೆ ಹಾರಿರುವ ವಿಡಿಯೊಗಳು ಇದೀಗ ಸದ್ಯ ಸಾಮಾಜಿಕ ಜಾಲತಾಣವನ್ನು ತಲ್ಲಣಗೊಳಿಸಿದೆ. ಜೋರ್ಹಾಟ್ ನ ನಿಮತಿ ಘಾಟ್ ನಲ್ಲಿ ಬುಧವಾರ ಸಂಭವಿಸಿದ ದುರ್ಘಟನೆಯಲ್ಲಿ 23 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.

Edited By : Nirmala Aralikatti
PublicNext

PublicNext

09/09/2021 07:10 pm

Cinque Terre

84.74 K

Cinque Terre

0

ಸಂಬಂಧಿತ ಸುದ್ದಿ