ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಇನ್ನೊಂದು ಸುತ್ತು ಮಹಾಮಳೆ?

ಬೆಂಗಳೂರು-ರಾಜ್ಯದಲ್ಲಿ ಮತ್ತೆ ಮಹಾಮಳೆಯಾಗುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ ಬೆಂಗಳೂರು ನಗರ ಸೇರಿ 9 ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ‌. ಹೀಗಾಗಿ ಈ ಬಗ್ಗೆ ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಜನ ಪ್ರವಾಹದಿಂದ ನಲುಗಿ ಹೋಗಿರುವಾಗ ವರುಣ ಮತ್ತೊಮ್ಮೆ ಬರೆ ಎಳೆಯಲು ತಯಾರಾದಂತಿದೆ.

ಎಲ್ಲೆಲ್ಲಿ ಮಳೆ? - ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೋಲಾರ, ತುಮಕೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.

Edited By : Nagaraj Tulugeri
PublicNext

PublicNext

23/10/2020 06:10 pm

Cinque Terre

37 K

Cinque Terre

5

ಸಂಬಂಧಿತ ಸುದ್ದಿ