ಮೈಸೂರು :ಮೈಸೂರು ದಸರಾ ಮಹೋತ್ಸವದ ವೇಳೆ ಮಹಿಷ ಪ್ರತಿಮೆಗೆ ಅಗ್ರಪೂಜೆಗೆ ಹೈಕೋರ್ಟ್ ನಿರಾಕಣೆಗೆ ಪ್ರತಿಕ್ರಿಯಿಸಿರುವ ಪ್ರೊ.ನಂಜರಾಜೇ ಅರಸ್, ಬೇರೆ ಸರ್ಕಾರದ ಅವಧಿಯಲ್ಲಿ ಮಹಿಷ ದಸರಾ ಎಂದೇ ಆಚರಣೆಗಳನ್ನು ಮಾಡುತ್ತಿದ್ದೆವು. ಆದರೆ ಈಗ ಕೆಲ ಪದ್ಧತಿಯನ್ನೇ ಬದಲಿಸಲಾಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಸರಾ ವೇಳೆ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆಗೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿ, ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ನಂಜರಾಜೇ ಅರಸ್, ಸಾವರ್ಕರ್ ಫೋಟೋ ಹಾಕಿ ಗಣೇಶ ಮೆರವಣಿಗೆ ಮಾಡುತ್ತಾರೆ. ಗಾಂಧಿ ಕೊಂದ ಗೋಡ್ಸೆ ಫೋಟೋ ಮೆರವಣಿಗೆ ಮಾಡ್ತಾರೆ ಮಹಿಷಾಸುರ ಅವರಿಗಿಂತ ಕೆಟ್ಟವನ? ಎಂದು ಪ್ರಶ್ನಿಸಿದ್ದಾರೆ.
ಅಸುರ ಅಂದ್ರೆ ಅ+ಸುರ, ಪ್ರಾಣ ಯಾರು ರಕ್ಷಿಸುತ್ತಾರೆ ಅವರು ಅಸುರ. ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಬೇರೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮಹಿಷ ದಸರ ಮಾಡುತ್ತೇವೆ ಎಂದು ಹೇಳಿದ್ದಾರೆ.
Kshetra Samachara
25/09/2022 06:04 pm