ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಯಶಸ್ವಿ ಆದ ಹಿನ್ನೆಲೆಯಲ್ಲಿ ಗಜಪಡೆ ಕ್ಯಾಪ್ಟನ್ "ಅಭಿಮನ್ಯು"ವಿನ ಸಾರಥಿ ವಸಂತ ಸಂತಸ ವ್ಯಕ್ತಪಡಿಸಿದ್ದಾರೆ.
ದಸರಾ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಬಾರಿ ನಾನೆಂದೂ ನೋಡದಷ್ಟು ಜನರು ಜಂಬೂ ಸವಾರಿ ವೀಕ್ಷಣೆ ಮಾಡಿದ್ದಾರೆ. ಎಲ್ಲರಿಗೂ ತಾಯಿಯನ್ನು ನೋಡಬೇಕು ಎನ್ನುವ ಕನಸು. ಅದರಲ್ಲೂ ಆನೆಯ ಪಕ್ಕದಲ್ಲಿ ಹೋಗಬೇಕು ಎಂಬುದು ಜನರ ಆಸೆಯಾಗಿರುತ್ತದೆ.
ನಾನು ಜಂಬೂ ಸವಾರಿಗೆ ಹೋಗುವ ಮುನ್ನ ಚಾಮುಂಡಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಯಾವುದೇ ಕಹಿ ಘಟನೆ ನಡೆಯದೆ ಯಶಸ್ವಿಯಾಗಿ ದಸರಾ ಮುಕ್ತಾಯವಾಗಿದೆ. ಸಾಕಷ್ಟು ಜನರನ್ನು ನೋಡಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು
ಮಾವುತ ವಸಂತ ಖುಷಿಯಿಂದ ತಿಳಿಸಿದ್ದಾರೆ.
PublicNext
06/10/2022 08:17 pm