ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ನನ್ನ ಜೊತೆಯಲ್ಲೇ ಇದ್ದು ಮದ್ದು ಹಾಕಿದ್ದಾರೆ; ಎಸ್.ಟಿ ಸೋಮಶೇಖರ್ ಬೇಸರ

ಮೈಸೂರು: ದಸರಾ ಅದ್ವಾನವಾಯ್ತು ಎಂಬ ಎಚ್.ವಿಶ್ವನಾಥ್ ಟೀಕೆಯ ವಿಚಾರಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದು, ಕೆಲವರು ಜೊತೆಯಲ್ಲೇ ಇದ್ದು ಮದ್ದು ಹಾಕುವ ಕೆಲಸ ಮಾಡುತ್ತಾರೆ ಎಂದು ಕುಟುಕಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ರಾಜಕೀಯವಾಗಿ ಏನು ಮಾಡಲು ಆಗದಿದ್ದಾಗ ಪಕ್ಕದಲ್ಲೇ ಕುಳಿತು ಮದ್ದು ಹಾಕಿಬಿಡುತ್ತಾರೆ. ಅಂಥಹವರಿಗೆ ಚಾಮುಂಡಿ ತಾಯಿ ಒಳ್ಳೆ ಬುದ್ಧಿ ಕೊಡಲಿ. ಅವರನೆಲ್ಲಾ ಎದುರಿಸುವ ಶಕ್ತಿ ನನಗೆ ಕೊಡಲಿ. ದಸರಾ ಆದ ಮೇಲೆ, ದಸರಾ ನಡೆಯುವಾಗ ಇಂತ ಮದ್ದು ಹಾಕುವ ಕೆಲಸ ಜೊತೆಯಲ್ಲಿ ಇದ್ದವರಿಂದಲೇ ನಡೆದಿದೆ. ಅದು ನನಗೆ ಗೊತ್ತಿದೆ. ಎಲ್ಲವನ್ನೂ ಮೀರಿ ದಸರಾ ಯಶಸ್ವಿಯಾಗಿದೆ. ಪ್ರಧಾನಿ ಆದಿಯಾಗಿ ಎಲ್ಲರೂ ಪ್ರಶಂಸಿದ್ದಾರೆ ಎಂದರು.

Edited By : Manjunath H D
PublicNext

PublicNext

12/10/2022 05:48 pm

Cinque Terre

28.86 K

Cinque Terre

0