ಮೈಸೂರು: ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜೋಡೋ ಐಕ್ಯತಾ ಯಾತ್ರೆ ಸಾಗುತ್ತಿದೆ. ಅಲ್ಲಿನ ಸ್ಥಳ ಪರಿಶೀಲನೆಗೆ ಮೈಸೂರು ನಂಜನಗೂಡಿನ ಬದನವಾಳು ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಅವರು ಅಲ್ಲಿ ವಾಲಿಬಾಲ್ ಆಡುತ್ತಿದ್ದ ಮಕ್ಕಳ ಜತೆ ಸೇರಿಕೊಂಡು ತಾವೂ ಆಟವಾಡಿ ಬಾಲ್ಯದ ನೆನಪಿನಂಗಳಕ್ಕೆ ಜಾರಿದರು. ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಇದಕ್ಕೆ ಸಾಕ್ಷಿಯಾದರು.
PublicNext
27/09/2022 09:23 am