ಮೈಸೂರು: ಎಲ್ಲೆಂದರಲ್ಲಿ ಕಸ ಹಾಕುವವರಿಗೆ ಮನ ಮುಟ್ಟುವಂತೆ ವಿಶಿಷ್ಠ ರೀತಿಯಲ್ಲಿ ಮೈಸೂರಿನ ಪೌರಕಾರ್ಮಿಕರು ಜಾಗೃತಿ ಮೂಡಿಸಿದ್ದಾರೆ.
ಮೈಸೂರಿನ ಗೋಕುಲಂನಲ್ಲಿ ಈ ವಿನೂತನ ಜಾಗೃತಿ ಕೈಗೊಂಡಿದ್ದು, ಎಲ್ಲೆಂದರಲ್ಲಿ ಕಸ ಹಾಕುವ ರಸ್ತೆ ಉದ್ದಕ್ಕೂ ರಂಗೋಲಿ ಬಿಡಿಸಿದ ಪೌರ ಕಾರ್ಮಿಕರು, ನಾವು ನಿಮ್ಮಂತಯೇ ಮನುಷ್ಯರು ಎಂದು ಬರೆದು ಮನಮುಟ್ಟುವಂತೆ ಜಾಗೃತಿ ಮೂಡಿಸಿದ್ದಾರೆ. ಅದಲ್ಲದೆ ಕಸ ಹಾಕಿದರೆ ದಂಡ ಪಾವತಿಸುತ್ತಿರಿ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ನಗರವನ್ನು ಸ್ವಚ್ಛವಾಗಿಡಿ ಎಂಬ ಬರಹಗಳ ರಂಗೋಲಿ ಗಮನ ಸೆಳೆದಿದೆ. ಪೌರ ಕಾರ್ಮಿಕರ ಈ ರೀತಿಯ ಜಾಗೃತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
PublicNext
12/10/2022 11:50 am