ಮೈಸೂರು: ಮನೆಯೊಳಗೆ ಹಾವುಗಳು ಬಂದು ಕೂರುವುದನ್ನು ನೋಡಿದ್ದೇವೆ. ಆದರೆ ಶೂ ಒಳಗೆ ಹಾವು ಬಂತು ಕೂತರೆ ಏನು ಗತಿ? ಶೂ ಒಳಗೆ ನಾಗರಹಾವೊಂದು ಅವಿತುಕೊಂಡು ಆತಂಕಕ್ಕೆ ಕಾರಣವಾಗಿರುವ ಘಟನೆ ಮೈಸೂರಿನ ಮಹದೇವಪುರ ಗ್ರಾಮದ ಬಡಾವಣೆಯಲ್ಲಿ ನಡೆದಿದೆ.
ಮನೆಯ ಹೊರಗೆ ಶೂಗಳನ್ನು ಇಟ್ಟಿದ್ದು, ವ್ಯಕ್ತಿ ಶೂ ಹಾಕುಲು ಬಂದಾಗ, ಆತ ಒಮ್ಮೆಗೆ ದಂಗಾಗಿ ಹೋಗಿದ್ದಾನೆ. ಕಾರಣ ಆತನ ಶೂಯೊಳಗೆ ಉದ್ದದ ನಾಗರಹಾವೊಂದು ಅವಿತುಕೊಂಡು ಕೂತಿದೆ. ತಕ್ಷಣ ರಾಡ್‌ನಿಂದ ಹಾವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಹಾವು ಹೆಡೆಬಿಚ್ಚಿ ಬುಸ್ ಎಂದಿದೆ. ನಂತರ ನಿಧಾನವಾಗಿ ಹಾವನ್ನು ಹೊರ ತೆಗೆದು ಬಾಕ್ಸ್ ನೊಳಗೆ ಹಾಕಿದ್ದಾರೆ.
ಹಾವನ್ನು ಶೂನಿಂದ ತೆಗೆದು ಬಾಕ್ಸ್ ನೊಳಗೆ ಹಾಕುವ ಪ್ರಕ್ರಿಯೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ, ಇದೊಂದು ಭಯಾನಕ ಘಟನೆ, ರಕ್ಷಣೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ.. ಹೀಗೆ ನಾನಾ ಮಂದಿ ನಟ್ಟಿಗರು ಕಮೆಂಟ್ ಮಾಡಿದ್ದಾರೆ.
PublicNext
10/10/2022 02:16 pm