ನಂಜನಗೂಡು: ದುಡಿದು ತರುವ ತಾಯಿಯ ಕಷ್ಟವನ್ನು ನೋಡಲಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ನಾನು ದುಡಿದು ಮನೆಗೆ ವಾಪಸ್ ಬರ್ತೀನಿ ಎಂದು ಪತ್ರ ಬರೆದು ನಾಪತ್ತೆಯಾಗಿರುವ ಮನಕಲಕುವ ಘಟನೆ ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.
ನನ್ನ ಮಮ್ಮಿ ದುಡಿಯೋದು ನನಗೆ ಇಷ್ಟ ಇಲ್ಲ. ಆದ್ರಿಂದ ನಾನೇ ದುಡಿದು ಮನೆಗೆ ಬರ್ತೀನಿ, ಹುಡುಕುವ ಪ್ರಯತ್ನ ಮಾಡಬೇಡಿ ನನ್ನನ್ನು ಕ್ಷಮಿಸಿ ಬಿಡಿ ಎಂದು ಪತ್ರ ಬರೆದು ಒಂದು ವಾರದ ಹಿಂದೆ ಮನೆ ಬಿಟ್ಟುಹೋದ ಅಪ್ರಾಪ್ತ ಬಾಲಕ ಭರತ್ ಇದುವರೆಗೆ ಹಿಂದಿರುಗಿಲ್ಲ. ಮೊಮ್ಮಗ ಮನೆ ಬಿಟ್ಟ ದಿನದಿಂದ ಅಜ್ಜ ಅಜ್ಜಿ ಹಾಸಿಗೆ ಹಿಡಿದಿದ್ದಾರೆ.
ಕೆಂಪಿಸಿದ್ದನಹುಂಡಿ ಗ್ರಾಮದ ಶ್ರೀ ಕನಕದಾಸ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಭರತ್ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅದೇ ಶಾಲೆಯಲ್ಲಿ ತಾಯಿ ಮಹದೇವಮ್ಮ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ತಾಯಿ ಪಡುತ್ತಿರುವ ಪರಿಶ್ರಮ ಭರತ್ ಕಣ್ಣಾರೆ ಕಂಡು ನೊಂದು ಈ ನಿರ್ಧಾರ ಮಾಡಿದ್ದಾನೆ. ಇನ್ನು ನನ್ನ ಕಂದನನ್ನು ಹುಡುಕಿ ಎಂದು ಅಜ್ಜ ಮಲ್ಲಯ್ಯ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿಎಂ ಸುಗಂಧರಾಜು,ಪಬ್ಲಿಕ್ ನೆಕ್ಸ್ಟ್, ನಂಜನಗೂಡು
PublicNext
29/10/2024 12:37 pm