ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಮತ್ಸ್ಯ ಮೇಳಕ್ಕೆ ಕೃಷಿ ಸಚಿವರಿಂದ ಚಾಲನೆ.!

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ನಗರದ ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮತ್ಸ್ಯ ಮೇಳಕ್ಕೆ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಚಾಲನೆ ನೀಡಿದರು. ಈ ವೇಳೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರ್ ನಾಥ್, ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಇನ್ನಿತರರು ಅಧಿಕಾರಿಗಳು ಮತ್ಸ್ಯ ಮೇಳದ ಮಳಿಗೆಗಳನ್ನು ವೀಕ್ಷಿಸಿದರು.

ಮೈಸೂರು ಭಾಗದಲ್ಲಿ ಈವರೆಗೆ ನೋಡಲು ಸಾಧ್ಯವಾಗದ ಅಪರೂಪದ ಮೀನುಗಳು, ಬಣ್ಣದ ಅಲಂಕಾರಿಕ ಮೀನುಗಳ ಪ್ರದರ್ಶನ, ಟನಲ್‌ ಅಕ್ವೇರಿಯಂ ಮೇಳದ ಮುಖ್ಯ ಆಕರ್ಷಣೆಯಾಗಿದೆ. ಮೇಳದಲ್ಲಿ ಗೋಲ್ಡ್ ಫಿಶ್, ಟೈಗರ್ ಬರ್ದ್, ಫೈಟರ್, ಆರೋವನ, ಫ್ಲವರ್ಹಾರ್ನ್, ಪ್ಲಾಟಿ, ವೈಟ್ ಮೊಲಿಸ್, ಗಪ್ಪಿ ಸ್ವರ್ಡ್ ಟೈಲ್, ಏಂಜಲ್ ಫಿಶ್, ಮೊಲಿಸ್, ಬರ್ಡ್ಸ್, ಮುಂತಾದ ಅಲಂಕಾರಿಕ ಹಾಗೂ ಲಾಭದಾಯಕ ಮೀನು ಸಾಕಾಣಿಕೆ ಕುರಿತ ಮಾಹಿತಿ ಸಾರ್ವಜನಿಕರ ಕಣ್ಮನ ಸೆಳೆಯಿತು. ಈ ಬಾರಿ ಮತ್ಸ್ಯ ಮೇಳದಲ್ಲಿ ಸಿಹಿ ನೀರಿನ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್‌ ಅಕ್ವೇರಿಯಂ ಸೇರಿದಂತೆ 35 ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ವಿವಿಧ ಜಾತಿಯ, ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಡಿಯೋ ತೆಗೆದುಕೊಂಡು ಪ್ರವಾಸಿಗರು ಸಂಭ್ರಮಿಸಿದರು.

Edited By : Manjunath H D
PublicNext

PublicNext

05/10/2024 06:01 pm

Cinque Terre

23.48 K

Cinque Terre

0