ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ರೈಲು ತಡೆಗೆ ಮುಂದಾಗಿದ್ದ ರೈತರ ಬಂಧನ.!

ಮೈಸೂರು : ರೈಲು ತಡೆಗೆ ಮುಂದಾಗಿದ್ದ ರೈತರನ್ನ ಪೊಲೀಸರು ಬಂಧಿಸಿರುವ ಘಟನೆ‌ ಮೈಸೂರಿನ ರೈಲು ನಿಲ್ದಾಣದ ಬಳಿ ನಡೆದಿದೆ. ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಈ ರೈಲು ತಡೆ ಚಳುವಳಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈಲು ತಡೆಗೆ ಮುಂದಾಗಿದ್ದರು.

ಈ ವೇಳೆ‌ ರೈಲು ನಿಲ್ದಾಣದ ಹೊರಭಾಗದಲ್ಲೇ ರೈತರನ್ನ ಪೊಲೀಸರು ಬಂಧಿಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಈ ವೇಳೆ ಪರಿಸ್ಥಿತಿ ಬಿಗಿಯಾಗುವುದನ್ನ ಅರಿತ ಪೊಲೀಸರು ರೈತರನ್ನ ಬಂಧಿಸಿ ಕರೆದೊಯ್ದಿದ್ದಾರೆ. ಈ ನಡೆಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಆಕ್ರೋಶ‌ ಹೊರಹಾಕಿದ್ದಾರೆ.

Edited By : Ashok M
PublicNext

PublicNext

18/12/2024 03:22 pm

Cinque Terre

15.2 K

Cinque Terre

0