ಮೈಸೂರು : ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಆರೋಪದ ಮೇಲೆ ಹೊಸಹಳ್ಳಿ ಹಾಡಿಯ 3 ಜನರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದರು.
ಈ ಸಂಬಂಧ ಕೊಲೆ ಮತ್ತು ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ರೆ ಅರಣ್ಯ ವಲಯದ ಆರ್ಎಫ್ಓ ಅಮೃತೇಶ್, ಡಿಆರ್‌ಎಫ್‌ಓ ಕಾರ್ತಿಕ್ ಯಾದವ್, ಸಿಬ್ಬಂದಿಗಳಾದ ಆನಂದ್, ಬಾಹುಬಲಿ, ರಾಮು, ಶೇಖರಯ್ಯ, ಸದಾಶಿವ, ಮಂಜು, ಉಮೇಶ್, ಸಂಜಯ್, ರಾಜಾನಾಯಕ್, ಸುಷ್ಮಾ, ಮಹದೇವಿ, ಅಯ್ಯಪ್ಪ, ಸೋಮಶೇಖರ್, ತಂಗಮಣಿ, ಸಿದ್ದಿಕ್ ಪಾಷಾ ಮೇಲೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅವರ ವಶದಲ್ಲಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಅದು ಕೊಲೆ ಎಂದು ಹಾಡಿಯ ಜನರು ಆರೋಪಿಸಿದ್ದಾರೆ. ಈ ಸಂಬಂಧ ಗುಂಡೆ ಅರಣ್ಯ ವಲಯದ ಆರ್ಎಫ್ಓ, ಡಿಆರ್‌ಎಫ್‌ಓ ಸೇರಿದಂತೆ 17 ಅರಣ್ಯ ಸಿಬ್ಬಂದಿ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಅಕ್ರಮ ಬಂಧನ ಸಂಬಂಧ ಪ್ರಕರಣ ದಾಖಲಾಗಿದೆ.
Kshetra Samachara
13/10/2022 02:58 pm