ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಮಳೆ-ಗಾಳಿಗೆ 63 ಕಂಬಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತ

ಸುಳ್ಯ: ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಸುಳ್ಯ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿಗೆ ವ್ಯಾಪಕವಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ತಂತಿಗಳು ತುಂಡಾಗಿ ಬಿದ್ದು ವಿದ್ಯುತ್ ಸಂಪರ್ಕ ಜಾಲವೇ ಅಸ್ತವ್ಯಸ್ತಗೊಂಡಿದೆ. ಸುಳ್ಯ ಹಾಗು ಬೆಳ್ಳಾರೆ ಮೆಸ್ಕಾಂ ಉಪ ವಿಭಾಗಗಳಲ್ಲಿ ಒಟ್ಟು 63 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.

ನಿನ್ನೆ ಸಂಜೆ 5.30ರ ವೇಳೆಗೆ ಮಳೆ, ಗಾಳಿ ಆರಂಭವಾಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಾತ್ರಿ 11.30ರ ವೇಳೆಗೆ ಸುಳ್ಯ ನಗರದಲ್ಲಿ ಪೈಚಾರ್ ತನಕ ಮಾತ್ರ ಕೆಲವು ಭಾಗದಲ್ಲಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದೆ. ನಗರದ ಕೆಲವು ಭಾಗ ಸೇರಿ ತಾಲೂಕಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿಲ್ಲ. ಮುಖ್ಯ ಲೈನ್‌ನಲ್ಲಿ ಅಮ್ಚಿನಡ್ಕ, ಆನೆಗುಂಡಿ, ಬೊಳುಬೈಲು, ದೊಡ್ಡೇರಿ ಸೇರಿ 5 ಕಡೆಗಳಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿತ್ತು.

ಸುಳ್ಯ ನಗರದ ಬೋರುಗುಡ್ಡೆಯಲ್ಲಿ 4 ಎಚ್‌ಟಿ ಲೈನ್ ಕಂಬಗಳು ಮುರಿದು ಬಿದ್ದಿದೆ. ಇದರಿಂದ ಜಟ್ಟಿಪಳ್ಳ, ಬೋರುಗುಡ್ಡೆ, ಸೂರ್ತಿಲ ಮತ್ತಿತರ ಭಾಗಗಳಲ್ಲಿ ಕಡಿತವಾದ ವಿದ್ಯುತ್ ಸಂಪರ್ಕ ಪುನಃ ಸ್ಥಾಪಿಸಿಲ್ಲ. ಈ ಭಾಗದಲ್ಲಿ 40 ಟಿಸಿ ಆಫ್ ಆಗಿದೆ. ಕಾಟೂರು, ಬೊಮ್ಮೆಟ್ಟಿ ಭಾಗದಲ್ಲಿ 4 ಎಚ್‌ಟಿ ಕಂಬ ಧರಾಶಾಯಿಯಾಗಿದೆ.

ಒಟ್ಟು ಸುಳ್ಯ ನಗರ ವ್ಯಾಪ್ತಿಯಲ್ಲಿ 8 ಕಂಬ, ಜಾಲ್ಸೂರಿನಲ್ಲಿ ಎಚ್‌ಟಿ’ ಎಲ್‌ಟಿ ಸೇರಿ 22 ಕಂಬ, ಅರಂತೋಡಿನಲ್ಲಿ ಎಚ್‌ಟಿ, ಎಲ್‌ಟಿ ಸೇರಿ 23 ಕಂಬ, ಬೆಳ್ಳಾರೆಯಲ್ಲಿ ಎಚ್‌ಟಿ, ಎಲ್‌ಟಿ ಸೇರಿ 10 ಕಂಬ ಹೀಗೆ ಒಟ್ಟು 63 ಕಂಬಗಳು ಮುರಿದು ಬಿದ್ದಿದೆ ಎಂದು ಮೆಸ್ಕಾಂ ಸುಳ್ಯ ಉಪ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

Edited By :
Kshetra Samachara

Kshetra Samachara

23/04/2022 07:34 pm

Cinque Terre

1.65 K

Cinque Terre

0

ಸಂಬಂಧಿತ ಸುದ್ದಿ