ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೋಕೂರು:ಜಲ ಜಾಗರಣಾ ಅಭಿಯಾನ ಮಾಹಿತಿ ಕಾರ್ಯಾಗಾರ

ಮುಲ್ಕಿ:ತೋಕೂರು ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲ ಜಂಟಿ ಆಶ್ರಯದಲ್ಲಿ ಜಲ ಜಾಗರಣಾ ಅಭಿಯಾನ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ನೆಹರು ಯುವ ಕೇಂದ್ರದ ರಘುವೀರ್ ಸೂಟರ್ ಪೇಟೆ ವಹಿಸಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಸುರತ್ಕಲ್ ಎನ್ಐಟಿಕೆ ಹಿರಿಯ ಪ್ರಾಧ್ಯಾಪಕ ಎಸ್.ಜಿ.ಮಯ್ಯ ರವರು ಭೂಗರ್ಭದ ಅಂತರ್ಜಲ ಸಂರಕ್ಷಣೆ ಮತ್ತು ನೀರಿನ ಬಳಕೆಯ ಬಗ್ಗೆ ಮಾರ್ಗದರ್ಶನವನ್ನು ನೀಡಿದರು.

ಯುವ ಸಂಪದ ಮಂಗಳೂರು ಯುವ ಪರಿವರ್ತನಾ ಅಧಿಕಾರಿ ಪರ್ವೀನ ಯು.ಟಿ ರವರು ಯುವಜನರ ಆಶೋತ್ತರಗಳಿಗೆ ಅವಶ್ಯಕವಾದ ವಿಚಾರಗಳ ಬಗ್ಗೆ ಮಾಹಿತಿಯನ್ನು ನೆರವೇರಿಸಿಕೊಟ್ಟರು.

ಪಡುಪಣಂಬೂರು ಗ್ರಾ ಪಂ ಕಾರ್ಯದರ್ಶಿ ಲೋಕನಾಥ ಭಂಡಾರಿಯವರು ಭೂಮಿಯ ಮೇಲಿನ ಪಂಚಭೂತಗಳ ಅನಿವಾರ್ಯತೆ ಮತ್ತು ಬಳಕೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಬಗ್ಗೆ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಜಿ ಪಂ ಸದಸ್ಯ ವಿನೋದ್ ,ಮಾಜಿ ತಾ ಪಂ ಸದಸ್ಯರಾದ ದಿವಾಕರ್ ಕರ್ಕೇರ. ನೆಹರು ಯುವ ಕೇಂದ್ರದ ನಾಗರಾಜಹೆಚ್. ಜಿ., ಮತ್ತು ಸುಗುಣ್, ಫೇಮಸ್ ಯೂತ್ ಕ್ಲಬ್ ನ ಗೌರವಾಧ್ಯಕ್ಷ ಗುರುರಾಜ ಎಸ್. ಪೂಜಾರಿ , ಪಡುಪಣಂಬೂರು ಗ್ರಾ ಪಂ ಸದಸ್ಯಸೀತಾರಾಮ ಮತ್ತು ಜ್ಯೋತಿ ಕುಲಾಲ್, ಫೇಮಸ್ ಯೂತ್ ಕ್ಲಬ್ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮಿನ್, ಹಿಮಕರ ಕೋಟ್ಯಾನ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/01/2022 07:13 pm

Cinque Terre

1.74 K

Cinque Terre

0

ಸಂಬಂಧಿತ ಸುದ್ದಿ