ಮಂಗಳೂರು: ಮಂಗಳೂರು ಹೊರವಲಯದ ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3.86 ಕೋಟಿ ರೂಪಾಯಿ ಅನುದಾನದಲ್ಲಿ ಕೇಂದ್ರ ಸರ್ಕಾರದ "ಜಲಜೀವನ್ ಮಿಷನ್ ಯೋಜನೆ" ಮನೆ ಮನೆಗೆ ಗಂಗೆ ಅನುಷ್ಠಾನಕ್ಕೆ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಶಂಕುಸ್ಥಾಪನೆ ನೆರವೇರಿಸಿದರು.
ಶಾಸಕರೊಂದಿಗೆ ಪಂಚಾಯತ್ ಅಧ್ಯಕ್ಷೆ ಜೀನತ್, ಉಪಾಧ್ಯಕ್ಷೆ ಎಮ್ಲಿಡಾ ಪಿಂಟೊ , ಪಂಚಾಯತ್ ಸದಸ್ಯರು, ಪಂಚಾಯತ್ ಪಿಡಿಒ ಕೃಷ್ಣ ನಾಯ್ಕ್, ಕಾರ್ಯದರ್ಶಿ ಪಂಕಜಾ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/08/2021 03:09 pm