ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲ್ಲಡ್ಕ: ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ; ಕಟೀಲು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕಲ್ಲಡ್ಕ: ಕಟೀಲುಪದವಿ ಪೂರ್ವ ಶಿಕ್ಷಣ ಇಲಾಖೆ ದ ಕ., ಶ್ರೀ ರಾಮ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಕಲ್ಲಡ್ಕದಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಟೀಲು ದೇವಳ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ಸಿ ವಿಭಾಗದ ಕುಮಾರಿ ಶ್ರೇಯ ದ್ವಿತೀಯ ಸ್ಥಾನ, ಪ್ರಥಮ ವಿಜ್ಞಾನ ಎ ವಿಭಾಗದ ಕುಮಾರಿ ತನ್ವಿ ಆರನೇ ಸ್ಥಾನ ಪಡೆದು ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ರಿದಮಿಕ್ ಯೋಗ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ಎ ವಿಭಾಗದ ಕುಮಾರಿ ಪ್ರೀತಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಮತ್ತು ಅಪೂರ್ವ ಪ್ರಥಮ ವಿಜ್ಞಾನ ಎ ವಿಭಾಗ , ಶ್ರೇಯಾ ದ್ವಿತೀಯ ವಾಣಿಜ್ಯ ಸಿ ವಿಭಾಗ, ಪ್ರೀತಿ ಪ್ರಥಮ ವಾಣಿಜ್ಯ ಎ ವಿಭಾಗ, ತನ್ವಿ ಪ್ರಥಮ ವಿಜ್ಞಾನ ಎ ವಿಭಾಗ, ಅಮಿಷಾ ಪ್ರಥಮ ವಿಜ್ಞಾನ ಬಿ ವಿಭಾಗ, ಇವರು ಜಿಲ್ಲಾ ಮಟ್ಟದ ದ್ವಿತೀಯ ತಂಡ ಪ್ರಶಸ್ತಿಯನ್ನು ಪಡೆದಿರುತ್ತಾರೆ.

Edited By : PublicNext Desk
Kshetra Samachara

Kshetra Samachara

30/08/2022 07:44 pm

Cinque Terre

702

Cinque Terre

0

ಸಂಬಂಧಿತ ಸುದ್ದಿ