ಮಂಗಳೂರು: ನಗರದ ಹೊರವಲಯದ ಅಡ್ಯಾರ್ ಗಾರ್ಡನ್ ಮೈದಾನದಲ್ಲಿ ಸಂಕಲ್ಪ್ ಫೌಂಡೇಶನ್ ಮತ್ತು ಮಂಗಳೂರು ಯೂಥ್ಸ್ ಆಯೋಜನೆ ಮಾಡಿದ್ದ ಎಂಎಲ್ಎ ಪ್ರೀಮಿಯರ್ ಲೀಗ್ 2022 ನಲ್ಲಿ ಅಜೇಯವಾಗಿ ಮುಲ್ಕಿ ಮೂಡುಬಿದಿರೆಯ ಸಫ್ರಾನ್ ವಾರಿಯರ್ಸ್ ತಂಡ ಭರ್ಜರಿಯಾಗಿ ಜಯಗಳಿಸಿ ಟ್ರೋಫಿ ಪಡೆದುಕೊಂಡಿದೆ
ವಿಜಯಕ್ಕೆ ಕಾರಣರಾದ ಗೌರೀಶ್ ನಾಯಕತ್ವದ ತಂಡದ ಎಲ್ಲಾ ಸದಸ್ಯರು ಮತ್ತು ವಿಶೇಷವಾಗಿ ಇದಕ್ಕಾಗಿ ಆಹರ್ನಿಶಿ ಶ್ರಮಿಸಿದ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಕೊ- ಒರ್ಡಿನೇಟರ್ ಆಗಿ ಕಾರ್ಯನಿರ್ವಹಿಸಿದ ರಮಾನಾಥ್ ಪೈ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಶೆಟ್ಟಿಗಾರ್ ಮತ್ತು ಕೇಶವ್ ಕರ್ಕೇರ ಹಾಗೂ ಹುರಿದುಂಬಿಸಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Kshetra Samachara
29/05/2022 10:15 pm