ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: "ಕಂಬಳದಲ್ಲಿ ಮಹಿಳಾ ಓಟಗಾರರಿಗೂ ಅವಕಾಶ, ತರಬೇತಿಗೆ ಚಿಂತನೆ"

ಮೂಡುಬಿದಿರೆ: ಕಂಬಳವನ್ನು ಹೊಸತನಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಸಕ್ತ ಮಹಿಳಾ ಓಟಗಾರರಿಗೂ ಸೂಕ್ತ ತರಬೇತಿ ನೀಡಿ ಸಾಧ್ಯವಾದರೆ ಮೂಡುಬಿದಿರೆಯಲ್ಲೇ ಮುಂದಿನ ಕಂಬಳದಲ್ಲಿ ಹೊಸ ಪ್ರಯೋಗ ಪರಿಚಯಿಸಲಾಗುವುದು ಎಂದು ಕಂಬಳ ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ಹೇಳಿದ್ದಾರೆ.

ಮೂಡುಬಿದಿರೆಯಲ್ಲಿ ನಡೆದ 18ನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳ ಫೈನಲ್ ಹಂತದ ವೇಳೆ ವೀಕ್ಷಕ ವಿವರಣೆಯ ಸಂದರ್ಭ ಮೂಡುಬಿದಿರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕಡಂಬ ಈ ಬಗ್ಗೆ ಪ್ರಸ್ತಾಪಿಸಿದರು.

ಕಂಬಳದ ಕುರಿತು ಬಹುಭಾಷೆಯಲ್ಲಿ ಸಿನಿಮಾ ತಯಾರಿ ಮಾಡಲು ಬೇಕಾದ ಪೂರಕ ಸಾಕ್ಷ್ಯಚಿತ್ರಕ್ಕೆ ಬಂದಿದ್ದ ಕನ್ನಡ ಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು, ಈ ಕಂಬಳದಲ್ಲಿ ಮಹಿಳಾ ಸಮಾನತೆಯೂ ಇದ್ದರೆ ಉತ್ತಮ ಎನ್ನುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಮಹಿಳಾ ಓಟಗಾರರಿಗೆ ಅವಕಾಶ ಕಲ್ಪಿಸುವ ಚಿಂತನೆ ಮಾಡಿದ್ದೆವು. ಆದರೆ, ಈ ಬಾರಿ ಮೂಡುಬಿದಿರೆಯಲ್ಲೇ ಮಹಿಳಾ ಓಟಗಾರರಿಗೆ, ಮಹಿಳಾ ಕೋಚ್‍ಗಳಿಂದಲೇ ತರಬೇತಿ ನೀಡಲಿದ್ದೇವೆ. ತರಬೇತಿ, ಆಯ್ಕೆ ಪ್ರಕ್ರಿಯೆ ಬಳಿಕ ಸಾಧ್ಯಾಸಾಧ್ಯತೆಗಳನ್ನು ಗಮನಿಸಿ, ಮುಂದುವರಿಯಲಾಗುವುದು. ಅದಾನಿ ಸಂಸ್ಥೆಯು ತರಬೇತಿಯ ಪ್ರಾಯೋಜಕತ್ವ ವಹಿಸಲು ಮುಂದಾಗಿದೆ ಎಂದು ಗುಣಪಾಲ ಕಡಂಬ ಹೇಳಿದರು.

ಮೂಡುಬಿದಿರೆಯಲ್ಲಿ 10 ಎಕರೆ ಸ್ಥಳಾವಕಾಶವೂ ಇರುವುದರಿಂದ ಕಂಬಳ ಮ್ಯೂಸಿಯಂ, ಸಭಾಂಗಣ, ಅಡಿಕೆ, ತೆಂಗು ತೋಟಗಳೂ ಸೇರಿದಂತೆ ಕಂಬಳದ ಸಮಗ್ರ ಚಿತ್ರಣದ ಹಿನ್ನೆಲೆಯಲ್ಲಿ ಓಟಗಾರರಿಗೆ ಮಾತ್ರವಲ್ಲ, ವೀಕ್ಷಕ ವಿವರಣೆಯಲ್ಲೂ ಮಹಿಳೆಯರಿಗೆ ಅವಕಾಶ ನೀಡುವ ಚಿಂತನೆಯಿದೆ. 2011ರಲ್ಲಿ ಓಟಗಾರರ ತರಬೇತಿ ಬಗ್ಗೆ ಹೇಳಿಕೊಂಡಾಗಲೂ ಹಲವರು ಇದನ್ನು ಹಾಸ್ಯಾಸ್ಪದವಾಗಿ ತೆಗೆದುಕೊಂಡಿದ್ದರು. ಈಗ ನಮ್ಮ ಸಾಧನೆಯ ಮಹತ್ವ ಎಲ್ಲರ ಮುಂದೆ ಇದೆ. ಈಗ ಮಹಿಳಾ ಓಟಗಾರರಿಗಾಗಿ ಮಹಿಳಾ ಕೋಚ್ ಮೂಲಕವೇ ತರಬೇತಿ ನೀಡುವ ಬಗ್ಗೆ ಯೋಜಿಸಲಾಗಿದೆ ಎಂದರು.

Edited By : Nagaraj Tulugeri
Kshetra Samachara

Kshetra Samachara

22/02/2021 10:41 am

Cinque Terre

3.77 K

Cinque Terre

0

ಸಂಬಂಧಿತ ಸುದ್ದಿ