ಮುಲ್ಕಿ:ಕಿನ್ನಿಗೋಳಿ ಸಮೀಪದ ಉಳೆಪಾಡಿ ಉಮಾಮಹೇಶ್ವರ ದೇವಸ್ಥಾನದ ಸ್ವಾಗತ ಗೋಪುರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಸ್ವಾಗತ ಗೋಪುರದ ದಾನಿಗಳಾದ ಮುಂಬೈ ತುಂಗಾ ಅಸ್ಪತ್ರೆಯ ಉಮೇಶ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಗ್ರಾಮಗಳಲ್ಲಿ ದೇವಸ್ಥಾನದ ಅಭಿವೃದ್ಧಿಯು ಭಕ್ತಿಯ ಸಂಕೇತವಾಗಿದ್ದು ದೇವರ ಆಶೀರ್ವಾದದಿಂದ ಗ್ರಾಮದಲ್ಲಿ ಸುಭೀಕ್ಷೆ ಇರಲಿ ಎಂದರು.
ಈ ಸಂದರ್ಭ ಅರ್ಚಕ ರಾಮದಾಸ್ ಭಟ್, ಮುಕ್ತೇಸರರಾದ ಕೃಷ್ಣ ಶೆಟ್ಟಿ ಪಡ್ಡಣಗುತ್ತು , ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ನಾರಾಯಣ ಶೆಟ್ಟಿ, ಶಿವರಾಮ ಶೆಟ್ಟಿ ಚೌಟ, ಐಕಳ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಶೆಟ್ಟಿ , ಸದಸ್ಯ ದಿವಾಕರ ಚೌಟ ಕಂಬಳ ಸಮಿತಿ ಅಧ್ಯಕ್ಷ ರೊಹಿತ್ ಹೆಗ್ಡೆ ಎರ್ಮಾಳ್, ಬಾಸ್ಕರ ಶೆಟ್ಟಿ ಉಳೆಪಾಡಿ, ಕರುಣಾಕರ ಶೆಟ್ಟಿ ಉಳೆಪಾಡಿ, ರಾಜೇಶ್ ಪೂಜಾರಿ, ಗುತ್ತಿಗೆದಾರ , ಸಂತೋಷ್ ಕುಮಾರ್ ಹೆಗ್ಡೆ , ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ ಕಿನ್ನಿಗೋಳಿ, ನಿರಂಜನ್, ಶಿವರಾಮ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಸ್ಕರ ಶೆಟ್ಟಿ, ಸದಸ್ಯ ಸತ್ಯಶಂಕರ ಶೆಟ್ಟಿ, ಅಶೋಕ್ ಶೆಟ್ಟಿ, ಗಣೇಶ್ ರಾವ್, ಎಂ.ಜಿ ಕರ್ಕೇರ, ವಿನಯ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/01/2022 03:12 pm