ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕ್ರಿಸ್ಮಸ್ ಆಚರಣೆ ಸರಳವಾಗಿರಲಿ; ಬಿಷಪ್

ಮಂಗಳೂರು: ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಕ್ರಿಸ್ಮಸ್ ಆಚರಣೆ ಸರಳವಾಗಿರಲಿ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟಲ್ ಪಾವ್ಲ್ ಡಿಸೋಜ ಕರೆ ನೀಡಿದ್ದಾರೆ.

ಬಿಷಪ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕ್ರಿಸ್ಮಸ್ ಸಂದೇಶ ನೀಡಿದ ಅವರು, ಯೇಸುವಿನ ಜೀವನ ಚರಿತ್ರೆ ಅರಿತಿರುವ ನಾವು, ಅವರಂತೆಯೇ ನಾವೂ ಅಶಕ್ತರೊಡನೆ ಬೆರೆತು ಕ್ರಿಸ್ಮಸ್ ಆರಿಸಬೇಕೆಂದು ನುಡಿದರು.

ಮಂಗಳೂರು ಧರ್ಮಪ್ರಾಂತ್ಯವು ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕೋವಿಡ್ ಲಾಕ್ ಡೌನ್ ಸಂದರ್ಭ ಸುಮಾರು 1.5 ಕೋಟಿ ರೂ. ಮೌಲ್ಯದ ನಾನಾ ರೀತಿಯ ನೆರವನ್ನು ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ರಾಯ್ ಕ್ಯಾಸ್ತಲಿನೊ, ರೆ.ಫಾ. ವಿಕ್ಟರ್ ವಿಜಯ್ ಲೋಬೊ, ಫಾ. ರಿಚರ್ಡ್ ಲೋಬೊ, ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು

Edited By : Nagaraj Tulugeri
Kshetra Samachara

Kshetra Samachara

23/12/2020 05:17 pm

Cinque Terre

2.52 K

Cinque Terre

0

ಸಂಬಂಧಿತ ಸುದ್ದಿ