ಮುಲ್ಕಿ: ಸಮಾಜದಲ್ಲಿ ಶಾಂತಿ- ಸಹಬಾಳ್ವೆ ನಡೆಸುವವರೇ ಮಾನವ ಶ್ರೇಷ್ಠರಾಗುತ್ತಾರೆ. ಕತ್ತಲನ್ನು ದೂರ ಮಾಡಿ ಬೆಳಕನ್ನು ನೀಡಲು ಪ್ರೇರಣೆಯಾಗಿರುವ ಕ್ರಿಸ್‌ಮಸ್ ಆಚರಣೆ ಎಲ್ಲೆಡೆ ಮುಕ್ತ ಮನಸ್ಸಿನಿಂದ ನಡೆಯಲಿ ಎಂದು ಮಂಗಳೂರು ಡಯಾಸಿಸ್ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹ ಹೇಳಿದರು.
ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಮಂಗಳೂರು ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ನ ಸಹಯೋಗದಲ್ಲಿ ಹಳೆಯಂಗಡಿ ಇಂಡಿಯನ್ ಯೋಗ ಮಂದಿರ ಕುಬಲಗುಡ್ಡೆಯಲ್ಲಿ ಶನಿವಾರ ನಡೆದ ಅಂತರ್ ಕಾಲೇಜು- ಅಂತರ್ ಚರ್ಚುಗಳ ಕ್ರಿಸ್ಮಸ್ ಹಾಡುಗಳ ಸ್ಪರ್ಧೆ ಹಾಗೂ ಕ್ರಿಸ್ಮಸ್ ಸೌಹಾರ್ದ ಕೂಟ ಉದ್ಘಾಟಿಸಿ, ಕ್ರಿಸ್ಮಸ್ ಸಂದೇಶ ನೀಡಿದರು.
ಧಾರ್ಮಿಕ ವಿದ್ವಾಂಸ, ವೇದಮೂರ್ತಿ ಪಿ.ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಮಾತನಾಡಿ, ಬುದ್ಧಿಯ ಜ್ಞಾನದ ಅರಿವು, ಸುಜ್ಞಾನದ ಬದುಕು, ಸಾರ್ಥಕ ಜೀವನಕ್ಕೆ ಮುನ್ನುಡಿ ಎಂದರು.
ಸಾಗ್ ಬದ್ರಿಯ ಜುಮ್ಮಾ ಮಸೀದಿಯ ಖತೀಬರಾದ ಇ.ಎಮ್. ಅಬ್ದುಲ್ಲಾ ಮದನಿ ಕ್ರಿಸ್ಮಸ್ ಸಂದೇಶ ನೀಡಿ, 'ದೇವರೊಬ್ಬನೇ ನಾಮ ಹಲವು' ಎಂದು ತಿಳಿದು ಸರ್ವ ಧರ್ಮದವರನ್ನೂ ಒಂದು ಗೂಡಿಸುವ ಪ್ರಯತ್ನ ನಡೆಸಬೇಕು ಎಂದರು.
ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಮಂಗಳೂರು ಅಧ್ಯಕ್ಷ ಡೇನಿಯಲ್ ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಸ್ಮಸ್ ಹಬ್ಬ ಕೊಡುಗೆಗಳನ್ನು ನೀಡುವ ಸಂಭ್ರಮದ ಹಬ್ಬ. ಸಮಾಜಕ್ಕೆ ಸೇವೆಯ ಮೂಲಕ ಕೊಡುಗೆ ನೀಡುವ ಪ್ರಯತ್ನ ನಿರಂತರ ನಡೆಯಬೇಕು ಎಂದರು.
ಕಾನೂನು ಸಂಪನ್ಮೂಲ ವ್ಯಕ್ತಿಗಳಾದ ಪ್ರಸಾದ್ ಶೆಟ್ಟಿ ವಕೀಲರು ಉಡುಪಿ, ಮಂಜುನಾಥ್ ವಕೀಲರು ಮಂಗಳೂರು ಇವರು ಕಾನೂನು ಮಾಹಿತಿ ನೀಡಿದರು.
ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜು ಪ್ರಾಂಶುಪಾಲ ಡಾ. ಎಚ್.ಎಮ್. ವಾಟ್ಸನ್, ಚಾಮರಾಜನಗರ ಸಿ.ಎಸ್.ಐ. ಚರ್ಚ್ ಸಭಾಪಾಲಕ ರೆವೆ. ಪುಟ್ಟುರಾಜ್, ಸಭಾಪಾಲಕರು ಮುಲ್ಕಿ ಸಿ.ಎಸ್.ಐ. ಯುನಿಟ್ ಚರ್ಚ್ ಸಭಾಪಾಲಕ ರೆವೆ. ಎಡ್ವರ್ಡ್ ಎಸ್. ಕರ್ಕಡ, ಹಳೆಯಂಗಡಿ ಸಿ.ಎಸ್.ಐ. ಚರ್ಚ್ ಹಳೆಯಂಗಡಿ ಸಭಾಪಾಲಕ ರೆವೆ. ವಿನಯಲಾಲ್ ಬಂಗೇರ, ಕೃಷ್ಣಾಪುರ ಸಿ.ಎಸ್.ಐ. ಚರ್ಚು ಸಭಾಪಾಲಕ ರೆವೆ. ಐಸನ್ ಪಾಲನ್ನ, ಪಕ್ಷಿಕೆರೆ ಸಂತ ಜೂದರ ಚರ್ಚ್ ಪ್ರಧಾನ ಧರ್ಮಗುರು ರೆ. ಫಾ. ಮೆಲ್ವಿನ್ ನೊರೊನ್ಹಾ, ತೋಕೂರು ಸುಪೀರಿಯರ್ ಮರಿಯ ಕೃಪಾಲಯ ಕಾನ್ವೆಂಟ್ ಭಗಿನಿ ಮಾರ್ಗರೇಟ್, ಕದಿಕೆ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಕೆ. ಸಾಹುಲ್ ಹಮೀದ್ ಕದಿಕೆ, ಪ್ರಮೋದ್ ಭಟ್ ಎಳತ್ತೂರು ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ನಿಯಾಜ್ ಸ್ವಾಗತಿಸಿದರು. ಮೇರಿ ಸ್ವಪ್ನ ವಂದಿಸಿದರು. ನೋಣಯ್ಯ ರೆಂಜಾಳ ಹಾಗೂ ಪ್ರಸನ್ನಿ ನಿರೂಪಿಸಿದರು. ಅಂತರ್ ಕಾಲೇಜು ಕ್ರಿಸ್ಮಸ್ ಹಾಡುಗಳ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಂಗೀತ ಶಿಕ್ಷಕರಾದ ಹರಿಣಿ ಸುಶಾಂತಿ ಬಂಗೇರ, ಮೇರಿ ಸ್ವಪ್ನ, ಸಿಸ್ಟರ್ ಮಾರ್ಗರೇಟ್ ಸಹಕರಿಸಿದರು.
ಅಂತರ್ ಕಾಲೇಜು ಕ್ರಿಸ್ಮಸ್ ಹಾಡುಗಳ ಸ್ಪರ್ಧೆ ಯಲ್ಲಿ
ಪ್ರಥಮ: ಸುರತ್ಕಲ್ ಗೋವಿಂದದಾಸ ಕಾಲೇಜು, ಐಕಳ ಪೊಂಪೈ ಕಾಲೇಜು.
ದ್ವಿತೀಯ: ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು
Kshetra Samachara
20/12/2020 09:57 am