ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಿಮೊಗರು:"ಛತ್ರಪತಿ ಶಿವಾಜಿ ಹಿಂದೂ ಸಾಮ್ರಾಜ್ಯದ ರಕ್ಷಣೆಗೆ ಪರಕೀಯರ ವಿರುದ್ದ ಹೋರಾಡಿದ ವೀರ"

ಮಂಗಳೂರು: ನಗರದ ಹೊರವಲಯದ ಪಂಜಿಮೊಗರಿನ ಉರುಂದಾಡಿಯಲ್ಲಿ ಕಾಲನಿಯೊಂದಕ್ಕೆ ಶಿವಾಜಿನಗರ ಎಂದು ನಾಮಕರಣ ಮಾಡಲಾಗಿದ್ದು ,ಶಾಸಕ ಡಾ.ಭರತ್ ಶೆಟ್ಟಿ ವೈ ನೇತೃತ್ವದಲ್ಲಿ ಭಾರತಾಂಬೆ ಹಾಗೂ ಛತ್ರಪತಿ ಶಿವಾಜಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು‌ ಛತ್ರಪತಿ ಶಿವಾಜಿ ಹಿಂದೂ ಸಾಮ್ರಾಜ್ಯದ ರಕ್ಷಣೆಗೆ ಹಿಂದೂಗಳನ್ನು ಒಗ್ಗಟ್ಟು ಮಾಡಿ ಪರಕೀಯರ ವಿರುದ್ದ ಹೋರಾಡಿದ ಧೈರ್ಯಶಾಲಿ.ಇಂತಹ ಒಗ್ಗಟ್ಟು ಪ್ರತೀ ಬಡಾವಣೆಗಳಲ್ಲಿ ಮೂಡಬೇಕಿದೆ ಎಂದರು.

ರಾಜ ಎನ್ಎಂ ಪಿ ಟಿ, ಬಿಜೆಪಿ ಮುಖಂಡ ರಣ್ ದೀಪ್ ಕಾಂಚನ್, ಹರೀಶ್ ಶೆಟ್ಟಿ ನ್ಯಾಯವಾದಿ, ವಿವೇಕ್,

ಜಯಂತ್ ಉದ್ಯಮಿ, ವಾಮನ ಶೆಟ್ಟಿ ಉದ್ಯಮಿ ರಮೇಶ್ ಶೆಟ್ಟಿ ,ಭರತ್ ಕರ್ಕೇರ,ಸಂದೀಪ್ , ಮತ್ತಿತರರು ಭಾಗವಹಿಸಿದ್ದರು

Edited By : PublicNext Desk
Kshetra Samachara

Kshetra Samachara

03/10/2022 11:10 am

Cinque Terre

814

Cinque Terre

0

ಸಂಬಂಧಿತ ಸುದ್ದಿ