ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಕ್ಷೇತ್ರಕ್ಕೆ ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಅನುದಾನದಿಂದ 11 ಕೋಟಿ ವಿನಿಯೋಗ; ಉಮಾನಾಥ್

ಮುಲ್ಕಿ:ಕಳೆದ ನಾಲ್ಕು ವರ್ಷದಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರಕ್ಕೆ ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಅನುದಾನದಿಂದ 11 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಅವರು ಕಿನ್ನಿಗೋಳಿ ಸಮೀಪದ ದ.ಕ ಜಿ ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗೋಡುನಲ್ಲಿ ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ಪಂಡ್ ನಲ್ಲಿ ನಿರ್ಮಾಣಗೊಂಡ ಶೌಚಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಳೆವಿದ್ಯಾರ್ಥಿ ಸಂಘಗಳು ಸರಕಾರಿ ಶಾಲೆಗಳ ಬೆನ್ನೆಲುಬಾಗಿದ್ದು, ಶಾಲೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಎಂ.ಆರ್.ಪಿ.ಎಲ್ ನ ಅಧಿಕಾರಿ ನಾಗರಾಜ್ ರವರನ್ನು ಗೌರವಿಸಲಾಯಿತು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಸಾಹಿಷ್ ಚೌಟ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ನಿವೃತ್ತ ಮುಖ್ಯೋಪ್ಯಾಯ ವಿಶ್ವನಾಥ ಶೆಟ್ಟಿ, ಉಲ್ಲಂಜೆ ಪದ್ಮನೂರು ಕ್ಲಸ್ಟರ್ ನ ಸಿ.ಆರ್.ಪಿ, ರಾಮ್ ದಾಸ್ ಭಟ್, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಲ್ಲಿಕಾ ಪ್ರಕಾಶ್, ಶಾಲಾ ಮುಖ್ಯೋದ್ಯಾಯನಿ ದುಲ್ಸಿನ್ ಡಿಸೋಜ ತಿಲಕ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಸ್ವಾಗತಿಸಿ ಶಿಕ್ಷಕಿ ಐರಿನ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಪ್ರಮೀಳಾ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

19/07/2022 12:07 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ