ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಲ್ಪ ಸ್ವಲ್ಪ ಹಾನಿ ಸಂಭವಿಸಿದೆ. ಭಾರೀ ಮಳೆ ಗಾಳಿಗೆ ಶನಿವಾರ ರಾತ್ರಿ ವೇಳೆಗೆ ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡ್ ಹರಿಹರ ದೇವಸ್ಥಾನದ ಬಳಿ ಬಾಬುರಾಯ ಕಾಮತ್ ಎಂಬವರ ಮನೆಯ ಪಾರ್ಶ್ವ ಕುಸಿದು ಅಪಾರ ಹಾನಿ ಸಂಭವಿಸಿದೆ.
ಮನೆಯ ಅಡುಗೆ ಕೋಣೆಯ ಒಂದು ಗೋಡೆ ಕುಸಿದಿದ್ದು ರಾತ್ರಿ ವೇಳೆಯಾದ ಕಾರಣ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಮುಲ್ಕಿ ನಗರ ಪಂಚಾಯತ್ ಸದಸ್ಯ ಹರ್ಷರಾಜ ಶೆಟ್ಟಿ, ಮುಖ್ಯಾಧಿಕಾರಿ ಚಂದ್ರ ಪೂಜಾರಿ, ಆರ್ ಐ ದಿನೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮುಲ್ಕಿ ತಾಲೂಕು ವ್ಯಾಪ್ತಿಯ ಪಡು ಪಣಂಬೂರು, ಹಳೆಯಂಗಡಿ, ಕಿನ್ನಿಗೋಳಿ, ಅತಿಕಾರಿಬೆಟ್ಟು ಬಳ್ಕುಂಜೆ ಪರಿಸರದಲ್ಲಿ ಭಾರಿ ಮಳೆಯಾಗಿದ್ದು ಅಲ್ಪ ಸ್ವಲ್ಪ ಹಾನಿ ಸಂಭವಿಸಿದೆ.
Kshetra Samachara
18/07/2022 11:43 am