ಮುಲ್ಕಿ: ದುರ್ನಾತ ಬೀರುತ್ತಿರುವ ಹಂದಿ ಸಾಕಾಣಿಕೆ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯತ್ ಸದಸ್ಯೆಯರಿಬ್ಬರು ಗ್ರಾಮಸ್ಥರ ಪರವಾಗಿ ಪಡುಪಣಂಬೂರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದಾರೆ.
ಪುನರೂರು ಬಳಿಯ ಕೆರೆಕಾಡು ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ತಮ್ಮ ಜಮೀನಿನಲ್ಲಿ ಹಲವು ವರ್ಷಗಳಿಂದ ಹಂದಿ ಸಾಕಾಣಿಕ ನಡೆಸುತ್ತಿದ್ದು, ಕಳೆದ 2-3 ವರ್ಷಗಳಿಂದ ಇದರ ದುರ್ನಾತ ಹೆಚ್ಚಾಗುತ್ತಿದೆ. ಸಮೀಪದಲ್ಲಿ ಶಾಲೆಯೂ ಇದ್ದು, ಮಕ್ಕಳಿಗೆ ಹೋಗಿ ಬರಲೂ ಕಷ್ಟವಾಗುತ್ತಿದೆ ಎಂದು ಪಡುಪಣಂಬೂರು ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಒ ಅವರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಅಲ್ಲದೇ, ಯಾವುದೇ ಅನುಮತಿ ಇಲ್ಲದೆಯೂ ಹಂದಿ ಸಾಕಾಣಿಕೆ ಕೇಂದ್ರವು ನಡೆಯುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮಸ್ಥರ ಸಹಿಯುಳ್ಳ ಮನವಿ ಪತ್ರವನ್ನು ಗ್ರಾಮಸ್ಥರ ಪರವಾಗಿ ಸ್ಥಳೀಯ ಸದಸ್ಯೆಯರಾದ ಲಲಿತಾ ಯಾದವ ಹಾಗೂ ಶಾಂತ ಸಲ್ಲಿಸಿ, ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Kshetra Samachara
29/06/2022 06:56 pm