ಮುಲ್ಕಿ: ತಿನ್ನಿಗೊಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಕಳ-ಪಟ್ಟೆ- ಗುಡ್ಡೆ ಯಂಗಡಿ ರಸ್ತೆ ತೀವ್ರ ಹದಗೆಟ್ಟು ಹೋಗಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹೊಂಡ-ಗುಂಡಿಗಳಿಂದ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಐಕಳ ಕಂಬಳ ಬಳಿಯಿಂದ ಪಟ್ಟೆ ಗುಡ್ಡೆಯಂಗಡಿ ಮೂಲಕ ಕಿನ್ನಿಗೋಳಿಗೆ ಏಳಿಂಜೆ ಸಂಕಲಕರಿಯ ಪ್ರಧಾನ ರಸ್ತೆಯನ್ನು ಸಂಪರ್ಕಿಸುವ ಗ್ರಾಮೀಣ ಭಾಗದ ಸುಮಾರು ಎರಡು ಕಿಲೋಮೀಟರ್ ಉದ್ದದ ರಸ್ತೆ ಹಾಗೂ ಅಪಾಯದಲ್ಲಿರುವ ಕಿರುಸೇತುವೆಯಲ್ಲಿ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿದ್ದು ಈ ಭಾಗದ ಜನತೆ ರಸ್ತೆ ಅವ್ಯವಸ್ಥೆಯಿಂದ ಹೈರಾಣಾಗಿದ್ದಾರೆ.
ರಸ್ತೆ ಅವ್ಯವಸ್ಥೆ ಬಗ್ಗೆ ಅನೇಕಬಾರಿ ಪಂಚಾಯತಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದರೂ ರಾಜಕೀಯ ಚದುರಂಗದಾಟ ದಿಂದ ಇನ್ನೂ ರಸ್ತೆ ದುರಸ್ತಿ ಆಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಶಾಸಕರು ಎಚ್ಚೆತ್ತು ಈ ಭಾಗದ ಜನತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
25/06/2022 12:02 pm