ಮುಲ್ಕಿ: ಕಿನ್ನಿಗೋಳಿ ಸಮೀಪದ ಗುತ್ತಕಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಂಗನವಾಡಿ ಕೇಂದ್ರದಲ್ಲಿ ಸುಮಾರು 29 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಶಿಕಲಾ ಪುತ್ರನ್ ರವರನ್ನು ಶ್ರೀ ಮೂಕಾಂಬಿಕಾ ಶ್ರೀ ಶಕ್ತಿ ಗುಂಪು, ಶ್ರೀ ಜಗದಂಬಿಕಾ ಶ್ರೀ ಶಕ್ತಿ ಗುಂಪು ಗುತ್ತಕಾಡು ರವರ ಸಂಯುಕ್ತ ಆಶ್ರಯದಲ್ಲಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಮಾತನಾಡಿ ವೃತ್ತಿಯಲ್ಲಿ ಶ್ರದ್ಧೆ ಪ್ರಾಮಾಣಿಕತೆ ಇದ್ದರೆ ಜನ ಗುರುತಿಸುತ್ತಾರೆ ಎಂದು ಹೇಳಿ ನಿವೃತ್ತಿ ಜೀವನವು ಸುಖಮಯವಾಗಲಿ ಎಂದು ಶುಭ ಹಾರೈಸಿದರು.
ಕಿನ್ನಿಗೋಳಿ ಜಿ.ಪಂ ಮಾಜಿ ಸದಸ್ಯ ಪ್ರಮೋದ್ ಕುಮಾರ್, ಮಾಜಿ ಪಂಚಾಯತ್ ಸದಸ್ಯ ಟಿ.ಎಚ್ ಮಯ್ಯದ್ದಿ ,ಮಾಜಿ ತಾ ಪಂ ಸದಸ್ಯ ದಿವಾಕರ ಕರ್ಕೇರಾ, ಗುಂಪಿನ ಅಥ್ಯಕ್ಷರು,ಸರ್ವ ಸದಸ್ಯರು ಹಾಗೂ ಅಂಗನವಾಡಿ ಮಕ್ಕಳು ಉಪಸ್ಥಿತರಿದ್ದರು.
ವಾಣಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ಚಂದ್ರಕಲಾ ಧನ್ಯವಾದ ಅರ್ಪಿಸಿದರು.
Kshetra Samachara
10/05/2022 07:38 pm