ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಕಳ್ಳತನ ತಡೆದ ಮೂಡಬಿದಿರೆಯ ಬಜರಂಗದಳದ ಕಾರ್ಯಕರ್ತರು

ಮೂಡುಬಿದಿರೆ: ತಾಲೂಕಿನ ಕಡಂದಲೆ ಎಂಬಲ್ಲಿ ಅಕ್ರಮವಾಗಿ ಗೋಸಾಟ ಮಾಡುತ್ತಿದ್ದ ಗೋಕಳ್ಳರನ್ನು ತಡೆಗಟ್ಟಿ ಗೋವುಗಳನ್ನು ರಕ್ಷಿಸುವಲ್ಲಿ ಮೂಡಬಿದಿರೆಯ ಭಜರಂಗದಳದ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಮೂಡುಬಿದರೆ ಪರಿಸರದಲ್ಲಿ ಗೋಕಳ್ಳತನವು ನಡೆಯುತ್ತಿದ್ದ ಮಾಹಿತಿಯನ್ನು ಪಡೆದ ಬಜರಂಗದಳದ ಕಾರ್ಯಕರ್ತರು ಗೋಕಳ್ಳರ ಪತ್ತೆಗಾಗಿ ಕಾಯುತ್ತಿದ್ದರು. ಇಂದು ಮುಂಜಾನೆ 4 ಗಂಟೆಗೆ ಕಡಂದಲೆ ಪಾಲಡ್ಕ ಎಂಬಲ್ಲಿ ಅಕ್ರಮವಾಗಿ ಗೋಕಳ್ಳತನ ಎಸಗುತ್ತಿದ್ದ ನಿಖರ ಮಾಹಿತಿಯನ್ನು ಪಡೆದ ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ದಾಳಿ ಮಾಡಿದ್ದರು.

ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಗೋವುಗಳನ್ನು ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ವಿಷಯ ತಿಳಿದ ಮೂಡುಬಿದರೆ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿದ್ದು ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಗೋಕಳ್ಳತನ ಸೇರಿದಂತೆ ಅನೇಕ ಕ್ರಿಮಿನಲ್ ಆರೋಪಿ ಸಚ್ಚೇರಿಪೇಟೆಯ ಹಮ್ಜಾ ಸಹಿತ ನಾಲ್ವರು ಆರೋಪಿಗಳ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ನಾಲ್ಕಕ್ಕೂ ಅಧಿಕ ಗೋವುಗಳು ಹಾಗೂ ಕಳ್ಳತನಕ್ಕೆ ಬಳಸಿದ್ದ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

01/04/2022 01:50 pm

Cinque Terre

1.37 K

Cinque Terre

0

ಸಂಬಂಧಿತ ಸುದ್ದಿ